ಭಾರಿ ಮಳೆ: ಘಾಟಿ ಸಂಚಾರಕ್ಕೆ ತಡೆ

ಕುಂದಾಪುರ: ತಾಲೂಕಿನ ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಮಲೆನಾಡಿನಲ್ಲಿ ಮುಂದುವರಿದೆ. ಕೊಲ್ಲೂರು, ಕಮಲಶಿಲೆ, ಸಿದ್ಧಾಪುರ, ಹೊಸಂಗಡಿ, ಶಂಕರನಾರಾಯಣ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹೊಸಂಗಡಿ ಸಮೀಪದ ಬಾಳೆಬರೆ ಘಾಟಿಯ ಹಲವೆಡೆ ಗಾಳಿಮಳೆ ಅಬ್ಬರಕ್ಕೆ ಮರಗಿಡಗಳು ಮುರಿದು ಹೆದ್ದಾರಿಗೆ ಒರಗಿದ್ದು ಸಂಚಾರಕ್ಕೆ ತಡೆಯಾಗಿದೆ. 
    ಬಾಳೆಬರೆ ಘಾಟಿಯ ಚಂಡಿಕಾಂಬಾ ದೇವಸ್ಥಾನದ ಸನಿಹದ ತಿರುವಿನ ಇಕ್ಕೆಲಗಳಲ್ಲಿ ಕುಸಿತ ಉಂಟಾಗಿದ್ದು ವಾಹನ ಸಂಚಾರಕ್ಕೆ ಅಪಾಯ ಎದುರಾಗಿದೆ. ಸೂಕ್ತ ತಡೆಬೇಲಿ ನಿರ್ಮಿಸುವಂತೆ ವಾಹನ ಪ್ರಯಾಣಿಕರು ಆಗ್ರಹಿಸಿದ್ದಾರೆ. ಅಂಪಾರು ಬಸ್ ತಂಗುದಾಣ ರಾಜ್ಯ ಹೆದ್ದಾರಿಗೆ ತಾಗಿಕೊಂಡು ಗುಡ್ಡಜರಿತ ಉಂಟಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com