ಕುಂದಾಪುರ: ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಇದರ ವತಿಯಿಂದ ವೈದ್ಯರ ದಿನಾಚರಣೆ ಹೋಟೇಲ್ ಶೆರೋನ್ ಸಭಾಂಗಣದಲ್ಲಿ ಜರಗಿತು.
ಹಿರಿಯ ತಜ್ಞ ವೈದ್ಯ ಡಾ|ಎಂ.ರವೀಂದ್ರನಾಥ ರಾವ್ ಅವರು ಸಮಾಜಕ್ಕೆ ನೀಡಿದ ಅಮೂಲ್ಯ ಸೇವೆಗಾಗಿ ಸಮ್ಮಾನಿಸಲಾಯಿತು. ಮಣಿಪಾಲ ವಿ.ವಿ. ರೆಜಿಸ್ಟ್ರಾರ್ ಡಾ| ಪಿ.ಎಲ್.ಎನ್.ರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಐ.ಎಂ.ಎ.ಕುಂದಾಪುರ ಇದರ ಅಧ್ಯಕ್ಷ ಡಾ|ರಾಬರ್ಟ ರೆಬೆಲ್ಲೋ, ಕಾರ್ಯದರ್ಶಿ ಡಾ|ಮಹೇಶ್ ಜಿ. ಹಾಗೂ ಎಲ್ಲಾ ಐ.ಎಂ.ಎ. ಸದಸ್ಯರು ಹಾಗೂ ಕುಟುಂಬದವರು ಈ ಸಂದರ್ಭದಲ್ಲಿ ಹಾಜರಿಸಿದ್ದರು. ಐ.ಎಂ.ಎ.ಕುಂದಾಪುರ ಇದರ ಅಧ್ಯಕ್ಷ ಡಾ|ರಾಬರ್ಟ ರೆಬೆಲ್ಲೋ ವೈದ್ಯರ ದಿನಾಚರಣೆಯ ಬಗ್ಗೆ ಪಾವಿತ್ರ¤ತೆ ಹಾಗೂ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರು.
ಡಾ|ಕೆ.ಎಸ್.ಕಾರಂತ್ ಕಾರ್ಯಕ್ರಮ ನಿರ್ವಹಿಸಿದರು.
0 comments:
Post a Comment