ನಕ್ಸಲ್ ಶೇಖರ್‌ಗೆ 2 ವರ್ಷ ಜೈಲು ಶಿಕ್ಷೆ

ಕುಂದಾಪುರ: ತಾಲೂಕಿನ ಶಂಕರನಾರಾಯಣ ಪೊಲೀಸರು 2010ರ ಡಿ.1ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಬಂತನಾಗಿದ್ದ ನಕ್ಸಲ್ ಶೇಖರ್‌ಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

ಅಂದಿನ ಪಿಎಸ್‌ಐ ಶಾಂತಪ್ಪ ಮತ್ತು 8 ಪೊಲೀಸ್ ಸಿಬ್ಬಂದಿಗಳು ಶೇಖರ್‌ನನ್ನು ಬಂಸಿದ್ದರು. ಕೂಂಬಿಂಗ್ ಕಾರ್ಯಾಚರಣೆ ಸಂದರ್ಭ ಯಡಮೊಗ್ಗೆ ಗ್ರಾಮದ ಬಸವನ ಪಾಲು ಅರಣ್ಯ ಪ್ರದೇಶದಲ್ಲಿ ಅಪರಾಹ್ನ 3 ಗಂಟೆಗೆ ತಮಿಳುನಾಡು ಮೂಲದ ನಕ್ಸಲ್ ಎನ್. ಶೇಖರ ಆಲಿಯಾಸ್ ರಂಜಿತ್ ಆಲಿಯಾಸ್ ರವಿ ಆಲಿಯಾಸ್ ಪ್ರೇಮ್(25) ಪೊಲೀಸರನ್ನು ಕಂಡು ಓಡಲು ಯತ್ನಿಸಿದ್ದು ಪೊಲೀಸರು ಸುತ್ತುವರಿದು ಹಿಡಿದು ದಸ್ತಗಿರಿ ಮಾಡಿದ್ದರು. ಆತನ ವಶದಲ್ಲಿದ್ದ ಡಿಟೋನೇಟರ್, ಜೆಲಿಟಿನ್ ಕಡ್ಡಿ, ಮಾವೋವಾದಿ ಸಂಘಟನೆಯ ಕೆಲವು ಲೇಖನ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದರು. ಶಂಕರ ನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಎಎಸ್‌ಪಿ ಡಾ.ರಾಮ್‌ನಿವಾಸ್ ಸೇಪಾಠ್ ತನಿಖೆ ಕೈಗೆತ್ತಿಕಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 

ನ್ಯಾಯಾಲಯವ ಸಾಕ್ಷಿ ವಿಚಾರಣೆ ನಂತರ ವಾದ-ವಿವಾದಗಳನ್ನು ಆಲಿಸಿ ಅಕ್ರಮ ಸೋಟಕಗಳನ್ನು ಹೊಂದಿದ್ದ ಆಪಾದನೆ ಸಾಬೀತಾಗಿದೆ ಎಂದು ತೀರ್ಪಿತ್ತಿದೆ. ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾೀಶ ರಾಜಶೇಖರ ವೆಂಕಣ್ಣಗೌಡ ಪಾಟೀಲ್ ಶಿಕ್ಷೆ ವಿಸಿ ತೀರ್ಪು ನೀಡಿದ್ದಾರೆ. ಆರೋಪಿಯು ಈ ಶಿಕ್ಷೆಯನ್ನು ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಅನುಭವಿಸಿದ್ದು ಈತನ ವಿರುದ್ಧ ಆಂಧ್ರಪ್ರದೇಶದಲ್ಲಿ ಇನ್ನೂ ಪ್ರಕರಣ ಬಾಕಿ ಇರುವುದು ತಿಳಿದುಬಂದಿದೆ. ಸರಕಾರದ ಪರ ಉಡುಪಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್. ಜಿತೂರಿ ವಾದಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com