ಮೂತ್ರಕೋಶದಲ್ಲಿ 600 ಗ್ರಾಂ ತೂಕದ ಕಲ್ಲು !

ಕುಂದಾಪುರ : ಕೋಟೇಶ್ವರ ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯಲ್ಲಿ 61ರ ಹರೆಯದ ವ್ಯಕ್ತಿಯ ಮೂತ್ರಕೋಶ ಶಸ್ತ್ರಚಿಕಿತ್ಸೆ ನಡೆಸಿ 600 ಗ್ರಾಂ ತೂಕದ ಕಲ್ಲು ಹೊರತೆಗೆಯಲಾಗಿದೆ. ದೇಶದ ಇತಿಹಾಸದಲ್ಲಿ ವ್ಯಕ್ತಿಯೊಬ್ಬರ ಮೂತ್ರಕೋಶದಲ್ಲಿ ಪತ್ತೆಯಾಗಿರುವ ಭಾರಿ ಗಾತ್ರದ ಕಲ್ಲು ಇದು ಎಂದು ಅಂದಾಜಿಸಲಾಗಿದೆ. 

ಹೊಸನಗರ ತಾಲೂಕಿನ ಸೋನಾಳಿ ನಿವಾಸಿ ಕುಶಲ ಶೆಟ್ಟಿ(61) 12 ವರ್ಷಗಳ ಹಿಂದೆ ಬೆನ್ನು, ಸೊಂಟ ನೋವು ಕಾಣಿಸಿಕೊಂಡಿತ್ತು. ಸಾಮಾನ್ಯ ನೋವೆಂದು ಅವರು ಭಾವಿಸಿ ನೋವು ನುಂಗಿಕೊಂಡು ಮುಂದುವರಿದಿದ್ದರು. ಜು.17ರಂದು ನೋವು ವಿಪರೀತಗೊಂಡಿದ್ದರಿಂದ ಹೊಸನಗರದ ಜಯನಗರ ಆಸ್ಪತ್ರೆಗೆ ದಾಖಲುಗೊಂಡಿದ್ದರು. ಅಲ್ಲಿ ಮಾಡದ ಶಿಪಾರಸ್ಸಿನಂತೆ ಅಂಕದಕಟ್ಟೆಯ ಸರ್ಜನ್ ಆಸ್ವತ್ರೆಗೆ ದಾಖಲುಗೊಂಡಿದ್ದರು. 

ತಪಾಸಣೆ ನಡೆಸಿದ ಸರ್ಜನ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ವಿಶ್ವೇಶ್ವರ ಅವರ ನೇತತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಕಲ್ಲು ಹೊರೆತೆಗೆದಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com