ಗೊಂದಲದ ಗೂಡಾದ ಲಂಡನ್ ಯಕ್ಷಗಾನ ಸ್ಪರ್ಧೆ

ಕುಂದಾಪುರ: ಲಂಡನ್‌ನಲ್ಲಿ ಆಯೋಜಿಸಲಾಗಿರುವ ಯಕ್ಷಗಾನ ಪ್ರದರ್ಶನ ಗೊಂದಲದ ಗೂಡಾಗಿದ್ದು , ಹವ್ಯಾಸಿ ಕಲಾತಂಡಗಳನ್ನು ತಾತ್ಸಾರದಿಂದ ಕಾಣಲಾಗುತ್ತಿದೆ ಎಂದು ತೆಕ್ಕಟ್ಟೆ ಯಶಸ್ವಿ ಕಲಾವಂದದ ಪ್ರಮುಖ, ಹವ್ಯಾಸಿ ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆ ಆರೋಪಿಸಿದ್ದಾರೆ. 

  ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ಧೆಯ ವಿಚಾರವಾಗಿ ಹಲವಾರು ಗೊಂದಲ ಉದ್ಭವಿಸಿದೆ. ಗೊಂದಲಕ್ಕೆ ಉತ್ತರಿಸಬೇಕಾದ ಕುಂಠಿಕಾನ ಪ್ರತಿಷ್ಠಾನ ನುಣುಚಿಕೊಳ್ಳುತ್ತಿದೆ ಅವರು ಅಸಮಾಧಾನ ವ್ಯಕ್ತಪಡಿಸಿದರು. 

ಲಂಡನ್‌ನಲ್ಲಿ ಯಕ್ಷಗಾನ ಸ್ಪರ್ಧೆಯ ಆಯೋಜಕರಾಗಿರುವ ಗೋಪಾಲಕೃಷ್ಣ ಭಟ್ ಕಾರ್ಕಳ ಕರೆ ಮಾಡಿ ನಮ್ಮ ತಂಡ ಭಾಗವಹಿಸುವಂತೆ ಮನವಿ ಮಾಡಿಕೊಂಡಿದ್ದರು. ಅದರಂತೆ ಸಂಸ್ಥೆ 2 ತಂಡಗಳು ಅರ್ಜಿ ಸಲ್ಲಿಸಿದ್ದವು. ತಂಡ ಆಯ್ಕೆಯಾದ ವಿಚಾರ ಕಣಿಪುರ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. 24 ಹವ್ಯಾಸಿ ಬಡಗು ತಂಡಗಳು ಆಯ್ಕೆಯಾಗಿರುವ ಬಗ್ಗೆ ಅದರಲ್ಲಿ ತಿಳಿಸಲಾಗಿತ್ತು. 

ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ಹವ್ಯಾಸಿ ತಂಡಗಳ ಸಂಖ್ಯೆ 21ಕ್ಕೆ ಇಳಿದಿತ್ತು. ಸಿರಿಕಲಾ ಬೆಂಗಳೂರು, ಕಾಳಿಂಗ ಯಕ್ಷಕಲಾ ವೈಭವ ಬೆಂಗಳೂರು, ಯಕ್ಷಸಿರಿ ಬೆಂಗಳೂರು ತಂಡವನ್ನು ಕೈಬಿಡಲಾಗಿತ್ತು. ಗೊಂದಲದ ಬಗ್ಗೆ ವಿಚಾರಿಸಿದಾಗ ಮುದ್ರಣ ದೋಷ ಎಂಬ ಉತ್ತರ ಸಿಕ್ಕಿತ್ತು. ಒಬ್ಬ ವತ್ತಿಪರ ಹವ್ಯಾಸಿ ತಂಡದಲ್ಲಿದ್ದರೂ, ಅದು ವತ್ತಿಪರ ತಂಡ ಎಂಬ ಮಾನದಂಡವನ್ನು ಮುಂದಿಡಲಾಯಿತು. ಹಾಗಂತ ಎಲ್ಲದ್ದಕ್ಕೂ ಈ ಮಾನದಂಡ ಇಲ್ಲದಿರುವುದು ಬೆಳಕಿಗೆ ಬಂದಿದೆ. 

ಆಯ್ಕೆಯಾದ ತಂಡಗಳಿಗೆ ರೂ.25 ಸಾವಿರ ಗೌರವ ಧನ ನೀಡುವುದಾಗಿ ಮೊದಲು ತಿಳಿಸಿದ್ದು , ಇದೀಗ ಅದು ರೂ.15 ಸಾವಿರಕ್ಕೆ ಇಳಿದಿದೆ. ಸ್ಪರ್ಧಾ ಆಯೋಜಕರ ದಿನಕ್ಕೊಂದು ನಿರ್ಧಾರ, ಹೇಳಿಕೆಗಳು ಸಹಜವಾಗಿ ಹವ್ಯಾಸಿ ತಂಡಗಳ ತಲೆನೋವಾಗಿ ಕಾರಣವಾಗಿದೆ. ಈ ಎಲ್ಲ ಗೊಂದಲಗಳಿಂದ ದೂರವಿರುವ ನಿಟ್ಟಿನಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. 

ತೆಕ್ಕಟ್ಟೆ ಯಶಸ್ವಿ ಕಲಾವಂದ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕಾರ‌್ಯದರ್ಶಿ ವೆಂಕಟೇಶ್ ವೈದ್ಯ, ಗೌರವ ಸಲಹೆಗಾರ ಸುದರ್ಶನ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com