ಅತಿಥಿ ಉಪನ್ಯಾಸಕರ ಆಯ್ಕೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳಲ್ಲಿ ಹಾಗೂ ಮಂಗಳೂರು ಮತ್ತು ಮಡಿಕೇರಿಯಲ್ಲಿರುವ ಘಟಕ ಕಾಲೇಜುಗಳಲ್ಲಿ 2014-15ನೇ ಸಾಲಿಗೆ ಅತಿಥಿ ಉಪನ್ಯಾಸಕರ ಅವಶ್ಯಕತೆ ಇದ್ದು, ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಹೊಂದಿರುವ (ಕನಿಷ್ಠ ಶೇ. 55 ಅಂಕಗಳೊಂದಿಗೆ) ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವರ್ಗ, ಅನುಭವ, ದೂರವಾಣಿ ಸಂಖ್ಯೆ ಇತ್ಯಾದಿ ಸ್ವವಿವರಗಳುಳ್ಳ ಅರ್ಜಿ ಹಾಗೂ ಮೂಲ ಶೈಕ್ಷಣಿಕ ದಾಖಲೆಗಳೊಂದಿಗೆ ಕುಲಸಚಿವರ ಕಚೇರಿ, ಆಡಳಿತ ಸೌಧ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ-574199 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಯು.ಜಿ.ಸಿ. ಎನ್‌.ಇ.ಟಿ./ಎಸ್‌.ಎಲ್‌.ಇ.ಟಿ. ಉತ್ತೀರ್ಣತೆ/ಪಿ.ಎಚ್‌.ಡಿ./ಎಂ.ಫಿಲ್‌ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ವಿವರಗಳನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ www.mangaloreuniversity.ac.in ನಿಂದಲೂ ಪಡೆಯಬಹುದು.

ಆಗಸ್ಟ್‌ 5ರಂದು ಬೆಳಗ್ಗೆ 9 ಗಂಟೆಗೆ ಇಂಗ್ಲೀಷ್‌, ಅರ್ಥಶಾಸ್ತ್ರ, ಜರ್ನಲಿಸಮ್‌, ಗಣಕ ವಿಜ್ಞಾನ, ಭೌತಶಾಸ್ತ್ರ ಮತ್ತು ಅಪರಾಹ್ನ 1.30 ಗಂಟೆಗೆ ಆನ್ವಯಿಕ ಪ್ರಾಣಿಶಾಸ್ತ್ರ, ಶಿಕ್ಷಣ (ಒಇಜ.), ಪ್ರವಾಸೋದ್ಯಮ ಆಡಳಿತ, ವಾಣಿಜ್ಯ ಶಾಸ್ತ್ರ ಮತ್ತು ಆ. 7ರಂದು ಬೆಳಗ್ಗೆ 9 ಗಂಟೆಗೆ ಜೀವ ರಸಾಯನ ಶಾಸ್ತ್ರ,ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ, ಸಹಾಯಕ ಗ್ರಂಥಪಾಲಕರು ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲೊಳ್ಳಬಹುದು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com