ಸಂಭ್ರಮದ ಕರ್ಕಾಟಕ ಅಮಾವಾಸ್ಯೆ ಜಾತ್ರೆ

ಮರವಂತೆ: ನದಿ-ಕಡಲ ಸಂಗಮದ ಅಪೂರ್ವ ತಾಣವಾಗಿದ್ದು, ವಿಶ್ವವಿಖ್ಯಾತಿ ಪಡೆದ ಮರವಂತೆ ಕಡಲತಡಿಯಲ್ಲಿರುವ ಪುರಾಣಪ್ರಸಿದ್ಧ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಪ್ರಯುಕ್ತ ಜರುಗುವ ವಾರ್ಷಿಕ ಜಾತ್ರೆ ಶನಿವಾರ ಸಂಭ್ರಮ-ಸಡಗರದಿಂದ ನಡೆಯಿತು.

ನಸುಕಿನಿಂದಲೇ ಆಸುಪಾಸಿನ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ದಂಡು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಾಚೆಗಿನ ಸಮುದ್ರದಲ್ಲಿ ಸ್ನಾನಗೆ„ದು ಬಳಿಕ ಶ್ರೀ ವರಾಹ ಸ್ವಾಮಿ ದೇವಸ್ಥಾನದ ಬಳಿಯಿರುವ ಸೌಪರ್ಣಿಕಾ ನದಿಯಲ್ಲಿ ಸ್ನಾನಗೆ„ದು ಶ್ರೀದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು. ಕರ್ಕಾಟಕ ಅಮಾವಾಸ್ಯೆ ಜಾತ್ರೆಯ ಸಂಪ್ರದಾಯದಂತೆ ನವವಧುವರರು, ಕೃಷಿಕರು ಹಾಗೂ ಸ್ಥಳೀಯಭಾಗದ ಮೀನುಗಾರರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಶ್ರೀವರಾಹ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ವರ್ಷದ ಹರಕೆಯನ್ನು ಒಪ್ಪಿಸಿದರು.

ಭಕ್ತರು ಶ್ರೀ ದೇವರ ದರ್ಶನ, ಪೂಜೆ-ಪುನಸ್ಕಾರದಲ್ಲಿ ಸುಸೂತ್ರವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ದೇವಸ್ಥಾನದ ಆಡಳಿತ ಮಂಡಳಿಯು ಶಿಸ್ತುಬದ್ಧವಾದ ವ್ಯವಸ್ಥೆಯನ್ನು ಕೈಗೊಂಡಿತ್ತು. ಶ್ರೀದೇವರ ದರ್ಶನ ಪಡೆಯುವುದಕ್ಕಾಗಿ ಭಕ್ತಾದಿಗಳು ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿಯುದ್ದ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿತು. ಗಂಗೊಳ್ಳಿ ಠಾಣಾಧಿಕಾರಿ ಗೋವರ್ಧನ್‌ ಹಾಗೂ ಕುಂದಾಪುರ ಸಂಚಾರಿ ಪೋಲೀಸ್‌ ಅದಿಕಾರಿಗಳ ವಿಶೇಷ ಉಸ್ತುವಾರಿಯಲ್ಲಿ ಸಂಚಾರ ನಿಯಂತ್ರಣ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಬೆ„ಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯತ್‌ ಸದಸ್ಯ ಕೆ. ಬಾಬು ಶೆಟ್ಟಿ, ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಮೊದಲಾದ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದಶನವನ್ನು ಪಡೆದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಟಾರ್‌, ಸದಸ್ಯರಾದ ಅರ್ಚಕ ನರಸಿಂಹ ಅಡಿಗ, ಪ್ರಭಾಕರ ಮೊವಾಡಿ, ಗುಲಾಬಿ ಮೊಗವೀರ, ಶ್ರೀಮತಿ ಆಚಾರ್ಯ, ನರಸಿಂಹ ಖಾರ್ವಿ, ಶ್ರೀಧರ ಖಾರ್ವಿ, ರಾಮದಾಸ ಖಾರ್ವಿ, ರತ್ನಾಕರ ಹೆಬ್ಟಾರ್‌, ಧಾರ್ಮಿಕ ದತ್ತಿ ಇಲಾಖೆ ನಿರೀಕ್ಷಕ ಗಣೇಶ್‌ ರಾವ್‌ ಮೊದಲಾದವರು ಜಾತ್ರೆಯ ಸುವ್ಯವಸ್ಥೆಗೆ ಸಹಕರಿಸಿದರು. 50 ಸಾವಿರಕ್ಕೂ ಅದಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾಗಿ ಆಡಳಿತ ಮಂಡಳಿ ತಿಳಿಸಿದೆ.

-ಉದಯವಾಣಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com