ಮರವಂತೆ ಗ್ರಾ. ಪಂ.ಗೆ ಪಿಡಿಒ ತಂಡ ಭೇಟಿ

ಮರವಂತೆಉಡುಪಿಯಲ್ಲಿ ಪುನಶ್ಚೇತನ ತರಬೇತಿ ಪಡೆಯುತ್ತಿರುವ ಕುಂದಾಪುರ, ಉಡುಪಿ, ಕೊಪ್ಪ, ತೀರ್ಥಹಳ್ಳಿ, ಮೂಡಿಗೆರೆ, ಚಿಕ್ಕಮಗಳೂರು ತಾಲೂಕುಗಳ 19 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ತಂಡ ರಾಜ್ಯದ ಮಾದರಿ ಗ್ರಾಮ ಪಂಚಾಯತ್‍ಗಳಲ್ಲಿ ಒಂದೆನಿಸಿದ ಮರವಂತೆ ಗ್ರಾಮ ಪಂಚಾಯತ್‍ಗೆ ಗುರುವಾರ ಅಧ್ಯಯನ ಭೇಟಿ ನೀಡಿತು.
      ಅವರು ನಾಲ್ಕು ಉಪತಂಡಗಳಾಗಿ ಗ್ರಾಮ ಪಂಚಾಯತ್ ಆಡಳಿತ ವೈಖರಿ, ಅಭಿವೃದ್ಧಿ ಚಟುವಟಿಕೆಗಳು, ದಾಖಲೆಗಳ ನಿರ್ವಹಣೆ, ಅನುಕರಣೀಯ ಕಾರ್ಯವಿಧಾನಗಳ ಅಧ್ಯಯನ ನಡೆಸಿದರು. ಅಧ್ಯಕ್ಷೆ ಕೆ. ಎ. ಸುಗುಣಾ, ಉಪಾಧ್ಯಕ್ಷೆ ಪ್ರೇಮಾ, ಸದಸ್ಯರಾದ ಎಂ. ನರಸಿಂಹ ಶೆಟ್ಟಿ, ರೋಹಿಣಿ ದೇವಾಡಿಗ, ಶ್ರೀಮತಿ ಆಚಾರ್ಯ, ಗ್ರೇಶನ್ ಕ್ರಾಸ್ತಾ, ರಾಜ್ಯ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಎಸ್. ಜನಾರ್ದನ, ಅಭಿವೃದ್ಧಿ ಅಧಿಕಾರಿ ಗಣೇಶ ಹೆಬ್ಬಾರ್, ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್, ಸಿಬ್ಬಂದಿ ಗುರುರಾಜ್, ಶೇಖರ ಎಂ., ಪ್ರಭಾಕರ ಅವರೊಡನೆ ಚರ್ಚಿಸಿ, ಮಾಹಿತಿ ಸಂಗ್ರಹಿಸಿದರು. ದಾಖಲೆಗಳನ್ನು ಪರಿಶೀಲಿಸಿದರು. ಕೈಗೊಂಡ ನಾವೀನ್ಯತಾ ಪ್ರಯೋಗಗಳ ಬಗೆಗೆ ತಿಳಿದುಕೊಂಡರು. ರಾಜ್ಯ ಮತ್ತು ರಾಷ್ಟ್ರೀಯ ಪುರಸ್ಕಾರಗಳನ್ನು ಗಳಿಸಲು ಕಾರಣವಾದ ಅಂಶಗಳನ್ನು ಗಮನಿಸಿದರು.
    ತರಬೇತಿದಾರ ಕೆ. ನಾಗರಾಜ ಕಾರಂತ ತಂಡದ ನೇತೃತ್ವ ವಹಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com