ವರಮಹಾಲಕ್ಷ್ಮೀ ವೃತ: ಪೂರ್ವಭಾವಿ ಸಭೆ

ನಾಯ್ಕನಕಟ್ಟೆ: ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆಯ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟರಮಣ ಸೇವಾ ಸಮಿತಿಯ ಸಹಯೋಗದಿಂದ ಪ್ರಥಮ ಬಾರಿಗೆ ವರಮಹಾಲಕ್ಷ್ಮೀ ವೃತ ನಡೆಸುವುದರ ಪೂರ್ವಭಾವಿ ಸಭೆಯು ಸೇವಾ ಸಮಿತಿಯ ಅಧ್ಯಕ್ಷರಾದ ದಾಮೋದರ ಪ್ರಭು ಇವರ ಅಧ್ಯಕ್ಷತೆಯಲ್ಲಿ ಜರಗಿತು. ಅಗಸ್ಟ್ 8ರಂದು ಜರಗುವ ವೃತಾಚರಣೆಗೆ ನೂತನ ಮಹಿಳಾ ಸಮಿತಿಯನ್ನು ರಚಿಸಲಾಯಿತು. ನೂತನ ಮಹಿಳಾ ಸಮಿತಿಯ ಗೌರವಾಧ್ಯಕ್ಷರಾಗಿ ಜಯಶ್ರೀ ಭಟ್, ಅಧ್ಯಕ್ಷರಾಗಿ ಪಲ್ಲವಿ ಕಿಣಿ, ಉಪಾಧ್ಯಕ್ಷರಾಗಿ ಗಾಯತ್ರಿ ಭಟ್, ಕಾರ್ಯದರ್ಶಿಯಾಗಿ ಶ್ರೀಮತಿ ಶ್ಯಾನುಭಾಗ್, ಜೊತೆಕಾರ್ಯದರ್ಶಿ ಅಮೃತ ನಾಯಕ್, ಕೋಶಾಧಿಕಾರಿಯಾಗಿ ವಿಧ್ಯಾ ಕಾಮತ್, ಹಾಗೂ ಸಮಿತಿಯ ಸದಸ್ಯರಾಗಿ ಗೀತಾ ನಾಯಕ್, ರತ್ನಾವತಿ ಕಾಮತ್, ಪದ್ಮಾವತಿ ಪ್ರಭು, ರಕ್ಷಾ ಪೈ, ಪ್ರೀಯಾ ಪ್ರಭು, ವೀಣಾ ಶೆಣೈ, ದಿವ್ಯಾ ಭಟ್, ಕಾಂತಿನಿ ಪ್ರಭು, ಅನಿತಾ ಭಟ್, ವಿನಯಾ ಪ್ರಭು, ಸೌಮ್ಯ ಭಟ್, ಪೂಜಾ ಭಟ್, ಚಂದ್ರಕಲಾ ಕಿಣಿ, ರಮ್ಯ ಕಿಣಿ, ಅಕ್ಷತಾ ಭಂಡಾರಕರ್, ಅನಿತಾ ಕಾಮತ್ ಹಾಗೂ ವೈಷ್ಣವಿ ಶ್ಯಾನುಭಾಗ್ ಇವರುಗಳನ್ನು ಆಯ್ಕೆ ಮಾಡಲಾಯಿತು. 
ಈ ಸಂದರ್ಭದಲ್ಲಿ ದೇವಳದ ಅರ್ಚಕ ವೇದಮೂರ್ತಿ ವೀರವಿಠ್ಠಲ ಭಟ್, ಸೇವಾ ಸಮಿತಿಯ ಉಪಾಧ್ಯಕ್ಷ ಪುಂಡಲೀಕ ನಾಯಕ್, ಸೇವಾ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ ಪೈ ಕಾರ್ಯಕ್ರಮವನ್ನು ನಿರ್ವಹಿಸಿದರು. ಸದಸ್ಯ ವಿನಾಯಕ ಕಾಮತ್ ವಂದಿಸಿದರು., ಜಿ.ಎಸ್.ಬಿ. ಸಮಾಜ ಬಾಂಧವರು ಭಾಗವಹಿಸಿದ್ದರು.

ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com