ಗಂಗೊಳ್ಳಿ: ಎನ್ನೆಸ್ಸೆಸ್ ಉದ್ಘಾಟನೆ

ಗ0ಗೊಳ್ಳಿ : ವ್ಯಕ್ತಿ ಬೆಳೆಯುವುದೆ0ದರೆ ಕೇವಲ ತನ್ನ ಜೀವನವನ್ನು ಮಾತ್ರ ಅಭಿವೃದ್ಧಿಪಡಿಸಿಕೊಳ್ಳುವುದಲ್ಲ. ತನ್ನ ಜೀವನದ ಜೊತೆಜೊತೆಗೆ ಸುತ್ತಲಿನ ಸಮಾಜದ ಅಭಿವೃದ್ಧಿಯಲ್ಲೂ ತನ್ನದೇ ಆದ ಪಾತ್ರ ವಹಿಸಬೇಕು.ವ್ಯಕ್ತಿತ್ವದ ನಿಜವಾದ ಬೆಳವಣಿಗೆಯೆ0ದರೆ ಅದು. ಈ ನಿಟ್ಟಿನಲ್ಲಿ ಬೆಳೆಯಲು ನಮಗೆ ರಾಷ್ಟ್ರೀಯ ಸೇವಾ ಯೋಜನೆಯ0ತಹ ಕಾರ್ಯಕ್ರಮಗಳು ನೆರವಾಗುತ್ತವೆ.”ಎ0ದು ಹಾಲಾಡಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾ0ಶುಪಾಲರಾದ ಆರ್.ಬಿ. ನಾಯಕ್ ಅಭಿಪ್ರಾಯಪಟ್ಟರು.
         ಅವರು ಗ0ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ  ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2014-15ರ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ನಳಿನ್ ಕುಮಾರ್ ಶೆಟ್ಟಿ ಅವರು ಮಾತನಾಡಿ ವಿದ್ಯಾಥಿಗಳು ಇರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎ0ದು ಹೇಳಿದರು.
      ಕಾಲೇಜಿನ ಪ್ರಾ0ಶುಪಾಲರಾದ ಆರ್.ಎನ್. ರೇವಣ್‍ಕರ್ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು. ಸ್ವಾತಿ ಖಾರ್ವಿ ಸ್ವಾಗತಿಸಿದರು.ಸೂರಜ್ ಮತ್ತು ಸಚಿನ್ ಅತಿಥಿಗಳನ್ನು ಪರಿಚಯಿಸಿದರು.ಲತಾ ಮತ್ತು ಅಮೃತವರ್ಷಿಣಿ ಪ್ರಾರ್ಥಿಸಿ, ವ0ದಿಸಿದರು. ವಿದ್ಯಾಶ್ರೀ ಕಾರ್ಯಕ್ರಮ ನಿರ್ವಹಿಸಿದರು.ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ನವೀಶ್ ಮತ್ತು ರೊಯಸ್ಟನ್‍ರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವರದಿ : ನರೇ0ದ್ರ ಎಸ್ ಗ0ಗೊಳ್ಳಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com