ಕಾರವಾರ-ಬೆಂಗಳೂರು ರೈಲು: ಅವಧಿ ಕಡಿತಕ್ಕೆ ಮನವಿ

ಬೈಂದೂರು: ಕಾರವಾರ-ಬೆಂಗಳೂರು ನಡುವೆ ಈಗ ಓಡುವ ರೈಲು ಸುತ್ತು ಬಳಸಿನ ದಾರಿಯಲ್ಲಿ ಚಲಿಸುತ್ತಿರುವುದರಿಂದ ಪ್ರಯಾಣಿಕರಿಗೆ ಅನನುಕೂಲವಾಗುತ್ತಿದೆ. ಅದನ್ನು ಬದಲಿ ಮಾರ್ಗವಾದ ಅರಸೀಕೆರೆ ಮೂಲಕ ಓಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಬೈಂದೂರಿನ ಮೂಕಾಂಬಿಕಾ ರೈಲ್ವೇ ಯಾತ್ರಿ ಸಂಘ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ವಿನಂತಿಸಿದೆ.
    ಈ ರೈಲು ಮಂಗಳೂರು ಬಿಟ್ಟು ಬೆಂಗಳೂರು ತಲಪಲು 12 ಗಂಟೆ ತೆಗೆದುಕೊಂಡರೆ, ಉಡುಪಿಯ ಊರುಗಳಿಂದ 15 ಗಂಟೆ ತೆಗೆದುಕೊಳ್ಳುತ್ತದೆ. ಇದರಿಂದ ಪ್ರಯಾಣಿಕರಿಗೆ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತೀವ್ರ ಸಮಯ ವ್ಯರ್ಥವಾಗುತ್ತದೆ. ಈ ಮಾರ್ಗದ ಹಾಸನ, ಕೆ.ಆರ್‌. ನಗರ, ಮೈಸೂರು ನಡುವಿನ ಜನರು ಈ ರೈಲಿನ ಬಳಕೆಗೆ ಆಸಕ್ತಿ ಹೊಂದಿಲ್ಲ. ಆದುದರಿಂದ ಈ ಮಾರ್ಗ ಬದಲಿಸಿದರೆ ಅವರಿಗೆ ತೊಂದರೆಯಾಗದು. ಬದಲಾಗಿ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗುವುದು ಎಂದು ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಮನವಿಯಲ್ಲಿ ತಿಳಿಸಿದ್ದು, ಬದಲಿ ಮಾರ್ಗದ ಪರ್ಯಾಯ ವೇಳಾಪಟ್ಟಿ ಸೂಚಿಸಿದ್ದಾರೆ. ಈ ವಿಷಯವನ್ನು ಆದ್ಯತೆ ಎಂದು ಪರಿಗಣಿಸಿ ಬದಲಾವಣೆಗೆ ಕ್ರಮವಹಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com