ಅಕ್ಕನ ಅಂತ್ಯಕ್ರಿಯೆ ನಡೆಸಿದ ಬಳಿಕ ಮೃತಪಟ್ಟ ತಮ್ಮ

ಕೋಟ: ಇಲ್ಲಿನ ಹಂದಟ್ಟು ಚಟ್ಕೆರೆ ನಿವಾಸಿ ಶಂಕರ ಪೂಜಾರಿ (70) ಸಹೋದರಿ ಶಿವಮ್ಮ ಪೂಜಾರ‌್ತಿ(80) ಅವರ ಅಂತ್ಯಕ್ತಿಯೆಯನ್ನು ಪೂರೈಸಿ ಕೋಟ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಲಯನ್ಸ್ ಕಣ್ಣಿನ ಆಸ್ಪತ್ರೆ ಹಿಂಭಾಗದಲ್ಲಿನ ಅಂಬಾಗಿಲು ಕೆರೆಗೆ ಸ್ನಾನಕ್ಕಾಗಿ ತೆರಳಿದ ಸಂದರ್ಭದಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. 

ತನ್ನ ಅಕ್ಕ ಶಿವಮ್ಮನ ಅಂತ್ಯ ಸಂಸ್ಕಾರ ಮುಗಿಸಿ ಅಪರಕರ್ಮದ ಪ್ರಯುಕ್ತ ಸ್ನಾನಕ್ಕಾಗಿ ಅಂಬಾಗಿಲು ಕೆರೆಗೆ ಬಂದ ಶಂಕರ ಪೂಜಾರಿ ನೀರಿನಲ್ಲಿ ಮುಳುಗಿ ಮತಪಟ್ಟರು. ಮತರು ಕಷಿಕರಾಗಿದ್ದು, ಶವ ಸಂಸ್ಕಾರದಂತಹ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ಶವ ಸಂಸ್ಕಾರದ ವಿಧಿವಿಧಾನವನ್ನು ನೆರವೇರಿಸಿಕೊಡುತ್ತಿದ್ದರು. ಸ್ನಾನಕ್ಕಾಗಿ ನೀರಿಗೆ ಮುಳುಗಿದಾಗ ಮೇಲೆ ಬರದಿದ್ದನ್ನು ಕಂಡು ಸ್ಥಳೀಯರು ಕೋಟ ಪೋಲಿಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದು. ಘಟನಾ ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಶೋಧ ನಡೆಸಿದ್ದರು. ಕೇವಲ ಒಳ ಉಡುಪಿನಲ್ಲಿದ್ದ ಶಂಕರ ಪೂಜಾರಿ ಮತ ದೇಹ ಪಾತಾಳ ಗರಡಿಗೆ ಸಿಕ್ಕಿರಲಿಲ್ಲ. ಬಳಿಕ ಸ್ಥಳೀಯ ಮೀನುಗಾರರಿರ್ವರು ಬಿದಿರಿನ ಕೋಲು ಉಪಯೋಗಿ ನೀರಿನಲ್ಲಿ ಮುಳುಗಿರುವ ದೇಹವನ್ನು ಪತ್ತೆ ಹಚ್ಚಿ ಮೇಲೆ ತೆಗೆದರು. ಘಟನಾ ಸ್ಥಳಕ್ಕೆ ಕೋಟ ಠಾಣಾಧಿಕಾರಿ ಕೆ.ಆರ್.ನಾಯ್ಕ್, ಕುಂದಾಪುರ ಆಗ್ನಿಶಾಮಕ ದಳದ ಠಾಣಾಧಿಕಾರಿ ಭರತ್‌ಕುಮಾರ್ ಮತ್ತು ಸಿಬ್ಬಂದಿಗಳು, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಕರುಣಾಕರ ಪೂಜಾರಿ ಆಗಮಿಸಿದ್ದು, ಶವವನ್ನು ಮೇಲೆತ್ತುವಲ್ಲಿ ಸಹಕರಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com