ಯಕ್ಷಗಾನ ವೇಷಭೂಷಣ ಅಮೂಲ್ಯ ಸಂಪತ್ತು: ಮುದ್ರಾಡಿ

ಬೈಂದೂರು: ಯಕ್ಷಗಾನದ ವೇಷಭೂಷಣ ಸಮೃದ್ಧಿ, ಅದರ ಅಪೂರ್ವ ವರ್ಣ ಸಂಯೋಜನೆ ಈ ಕಲೆಯ ಅಪೂರ್ವ ಸಂಪತ್ತು. ಬೇರೆ ಯಾವುದೇ ಪ್ರದರ್ಶನ ಕಲೆಯಲ್ಲಿ ಈ ವೈವಿಧ್ಯತೆ ಕಂಡು ಬರುವುದಿಲ್ಲ ಎಂದು ಯಕ್ಷಗಾನ ಕಲಾವಿದ, ಸಾಹಿತಿ ಅಂಬಾ ತನಯ ಮುದ್ರಾಡಿ ಹೇಳಿದರು. 

ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಧಾರೇಶ್ವರ ಯಕ್ಷ ಬಳಗ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಬುಧವಾರ ಆರಂಭವಾದ ಹತ್ತು ದಿನಗಳ ಯಕ್ಷಗಾನ ವೇಷಭೂಷಣ ತಯಾರಿಕಾ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನಮ್ಮ ಹಿರಿಯರು ತಮ್ಮ ಚಿಂತನೆಯ ಮೂಲಕ ಕಲ್ಪನೆಗೆ ಸಿಗದ ಪೌರಾಣಿಕ ವ್ಯಕ್ತಿಗಳನ್ನು ವೇಷಭೂಷಣ ವಿಭಿನ್ನತೆಯ ಮೂಲಕ ಸಾಕ್ಷಾತ್ಕರಿಸಿದರು. ಯಾಂತ್ರಿಕ ಸೌಲಭ್ಯ ನಮ್ಮ ಕ್ರಿಯಾಶೀಲತೆಯನ್ನು ಮೊಟಕು ಗೊಳಿಸುತ್ತಿದೆ ಎಂದರು. 

ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಉಮೇಶ ಶ್ಯಾನುಭೋಗ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಮಾತನಾಡಿದರು. ಯಕ್ಷಗಾನ ಪ್ರೋತ್ಸಾಹಕರಾದ ಕೆ. ಬಾಲಕಷ್ಣ ಶ್ಯಾನುಭೋಗ್, ಪ್ರಕಾಶ ಐತಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಡಿ. ಆರ್. ಮೈಥಿಲಿ ಸ್ವಾಗತಿಸಿದರು. ಟ್ರಸ್ಟ್‌ನ ಸಂಸ್ಥಾಪಕ ಸುಬ್ರಹ್ಮಣ್ಯ ಧಾರೇಶ್ವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರತನ್ ಬಿಜೂರು ವಂದಿಸಿದರು. ವೇಣುಗೋಪಾಲ ನಿರೂಪಿಸಿದರು. 

*ನಮ್ಮ ಹಿರಿಯರು ತಮ್ಮ ಚಿಂತನೆಯ ಮೂಲಕ ಕಲ್ಪನೆಗೆ ಸಿಗದ ಪೌರಾಣಿಕ ವ್ಯಕ್ತಿಗಳನ್ನು ವೇಷಭೂಷಣ ವಿಭಿನ್ನತೆಯ ಮೂಲಕ ಸಾಕ್ಷಾತ್ಕರಿಸಿದರು. ಯಾಂತ್ರಿಕ ಸೌಲಭ್ಯ ನಮ್ಮ ಕ್ರಿಯಾಶೀಲತೆಯನ್ನು ಮೊಟಕುಗೊಳಿಸುತ್ತಿದೆ. -ಅಂಬಾತನಯ ಮುದ್ರಾಡಿ, ಸಾಹಿತಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com