ಬೈಂದೂರು: ಇಲ್ಲಿನ ಯಡ್ತರೆ ಗ್ರಾ.ಪಂ. ವ್ಯಾಪ್ತಿಯ ಹೊಸೂರಿನ ಮುಲ್ಲಿಬಾರು ಸ.ಹಿ.ಪ್ರಾ.ಶಾಲೆಯಲ್ಲಿ ಪ್ರಸ್ತುತ ಖಾಸಗಿ ಆಂಗ್ಲಮಾಧ್ಯಮ ಶಾಲೆಯ ಹಾವಳಿಯಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಂಠಿತವಾಗುತ್ತಿರುವ ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರೊಂದಾಗಿ ಎಸ್.ಡಿ.ಎಂ.ಸಿ.ಯ ಹಾಗೂ ಊರಿನ ಪರಊರಿನ ದಾನಿಗಳ ಹಾಗೂ ಶಿಕ್ಷಣಾಭಿಮಾನಿಗಳ ಸಹಕಾರದಿಂದ ಪರಿಶಿಷ್ಟ ಪಂಗಡದವರೇ ಹೆಚ್ಚಾಗಿರುವ ಸದ್ರಿ ಶಾಲೆಯಲ್ಲಿ ಪ್ರಸ್ತುತ ವರ್ಷದಿಂದಲೇ 1ರಿಂದ 8ರವರೆಗೆ ಆಂಗ್ಲಮಾಧ್ಯಮ ಶೈಲಿಯ ಶಿಕ್ಷಣದೊಂದಿಗೆ ಪ್ರಥಮ ಹಂತವಾಗಿ ನೂತನ ಎಲ್.ಕೆ.ಜಿ. ಹಾಗೂ ಯು.ಕೆ.ಜಿ ಶಿಕ್ಷಣ ವ್ಯವಸ್ಥೆಯನ್ನು ಪ್ರಾರಂಭ ಮಾಡಲಾಗಿದ್ದು ಸದ್ರಿ ವ್ಯವಸ್ಥೆಯನ್ನು ಸ್ಥಳೀಯ ಶಾಸಕ ಕೆ. ಗೋಪಾಲ ಪೂಜಾರಿಯವರು ವಿದ್ಯುಕ್ತವಾಗಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಗ್ರಾಮೀಣ ಪ್ರದೇಶವಾದ ಈ ಭಾಗದಲ್ಲಿ ಪರಿಶಿಷ್ಟ ಪಂಗಡದವರು ಹಾಗೂ ಬಡ ಜನರಿರುವ ಈ ವ್ಯಾಪ್ತಿಯಲ್ಲಿ ಯಾವುದೇ ಶೈಕ್ಷಣಿಕ ಡೊನೇಷನ್ ಇಲ್ಲದೇ ಉಚಿತವಾಗಿ ಈ ಯೋಜನೆಯನ್ನು ಪ್ರಾರಂಭಿಸಿದ ಶಿಕ್ಷಕ ವೃಂದಕ್ಕೆ ಹಾಗೂ ಕೊಡುಗೆ ನೀಡಿದ ಶಿಕ್ಷಣಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಪಾರ ಸಂಖ್ಯೆಯಲ್ಲಿ ನೆರೆದ ಪಾಲಕವೃಂದಕ್ಕೆ ಕರೆ ನೀಡಿ ಉಚಿತವಾಗಿ ನೀಡುತ್ತಿರುವ ಟೈ, ಬೆಲ್ಟ್ ಹಾಗೂ ಆಂಗ್ಲಮಾಧ್ಯಮ ಪುಸ್ತಕವನ್ನು ವಿತರಿಸಿದರು.
ಅತಿಥಿಗಳಾಗಿ ಸ್ಥಳೀಯ ಗ್ರಾ.ಪಂ. ಸದಸ್ಯರಾದ ಶ್ರೀಮತಿ ಲಲಿತಾ ಮರಾಠಿ, ಸಿ.ಜೆ. ರೋಯಿ, ಉದಯ ಮಾಕೋಡಿ ಹಾಗೂ ಬೈಂದೂರು ರೋಟರಿ ಕ್ಲಬ್ನ ಅಧ್ಯಕ್ಷ ಟಿ.ಆರ್. ಹುದಾರ್, ಮಾಜಿ ಕಾರ್ಯದರ್ಶಿ ಮಂಜುನಾಥ ಮಹಾಲೆ ಶಿಕ್ಷಣದ ಮಹತ್ವ ತಿಳಿಸಿದರು. ಸ್ಥಳೀಯ ವೈಲ್ಡ್ವುಡ್ ಅಥೆನ್ಸ್ ರೆಸಾರ್ಟ್ನ ವೈದ್ಯ ಡಾ| ಲಲಿತ್, ಎಸ್.ಡಿ.ಎಂ.ಸಿ.ಯ ಉಪಾಧ್ಯಕ್ಷೆ ಶ್ರೀಮತಿ ಪದ್ಮಾವತಿ, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಲಕ್ಷ್ಮೀ ನಾಯಕ್ ಉಪಸ್ಥಿತರಿದ್ದರು. ಅಧ್ಯಕ್ಷ ತಿಮ್ಮ ಮರಾಠಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ಗಿರೀಶ್ ಪಿ. ಮೇಸ್ತ ಸ್ವಾಗತಿಸಿ, ಸಹಶಿಕ್ಷಕ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿ, ರಾಮನಾಥ ಮೇಸ್ತ ಪ್ರಾಸಾವಿಕ ಮಾತನಾಡಿ, ಹಾಲೇಶ್ ಡಿ.ಆರ್. ವಂದಿಸಿ, ವಿನಾಯಕ ಪಟಗಾರ್ ಮಕ್ಕಳ ಯಾದಿ ವಾಚಿಸಿದರು.
0 comments:
Post a Comment