ಕೊಲ್ಲೂರು: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕುಂದಾಪುರ ತಾಲೂಕು, ಚಿತ್ತೂರು ವಲಯ ಇವರ ನೇತೃತ್ವದಲ್ಲಿ ಚಿತ್ತೂರು ವಲಯ ಮಟ್ಟದ ಕೃಷಿ ವಿಚಾರ ಸಂಕಿರಣ ಮಾರಣಕಟ್ಟೆಯಲ್ಲಿ ನಡೆಯಿತು.
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಶಂಕರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯ ಜನಜಾಗೃತಿ ವೇದಿಕೆಯ ಡಾ.ಅತುಲ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಇಂದಿರಾ ಶೆಟ್ಟಿ, ವಲಯ ಒಕ್ಕೂಟದ ನಿಕಟಪೂರ್ವಾಧ್ಯಕ್ಷ ಮಹಾಬಲ ಪೂಜಾರಿ ಮೆಕ್ಕೆ, ಶ್ರೀಕೂಟದ ಮೇಲ್ವಿಚಾರಕ ಈಶ್ವರ, ಚಿತ್ತೂರು ವಲಯ ಒಕ್ಕೂಟ ಅಧ್ಯಕ್ಷ ಗುರುರಾಜ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಚಂದ್ರಶೇಖರ ಉಡುಪ ಗೇರು ಬೆಳೆ, ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಬೆಳ್ತಂಗಡಿ ಅಡಿಕೆ ಕೃಷಿಯ ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಹನುಮಂತ ಕಾರ್ಯಕ್ರಮ ನಿರ್ವಹಿಸಿ, ಚಿತ್ತೂರು ವಲಯ ಮೇಲ್ವಿಚಾರಕ ಮಹೇಶ್ ಸ್ವಾಗತಿಸಿದರು. ಚಿತ್ತೂರು ಸೇವಾ ಪ್ರತಿನಿಧಿ ರೇವತಿ ವಂದಿಸಿದರು.
0 comments:
Post a Comment