ಪರ್ಜನ್ಯ ಜಪ ಸಂಪನ್ನ

ಕೋಟ: ಸಾಲಿಗ್ರಾಮ ವಲಯ ಬ್ರಾಹ್ಮಣ ಮಹಾಸಭಾ ಮತ್ತು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ವತಿಯಿಂದ ಮಳೆಗಾಗಿ ಪ್ರಾರ್ಥಿಸಿದ ಪರ್ಜನ್ಯ ಜಪ ಹಾಗೂ ವರುಣ ಜಪ ಕಾರ್ಯಕ್ರಮ 5 ದಿನಗಳ ಕಾಲ ನಡೆದು ಶುಕ್ರವಾರ ಸಂಪನ್ನಗೊಂಡಿದೆ. 1956ರ ಅನಂತರ ಇದೇ ಮೊದಲ ಬಾರಿಗೆ ಸಾಲಿಗ್ರಾಮ ಗುರುನರಸಿಂಹ ದೇವಾಲಯದಲ್ಲಿ ಈ ಜಪಾಚರಣೆ ಕೈಗೊಳ್ಳಲಾಗಿತ್ತು. ಪ್ರತಿದಿನ ಬೆಳಗ್ಗೆ 6ರಿಂದ 8.30ರ ವರೆಗೆ ದೇವಾಲಯದ ಪುಷ್ಕರಣಿಯಲ್ಲಿ ಆರಂಭದವಾದ ಜಪ ಪ್ರಥಮ ದಿನ ಪಾದದ ಒರೆಗಿನ ನೀರಲ್ಲಿ ನಿಂತು ಜಪಿಸಲಾಗಿತ್ತು. ಅನಂತರ ಎರಡನೇ ದಿನ ಮೊನಕಾಲು ನೀರು, ಮೂರನೇ ದಿನ ಸೊಂಟ ಮಟ್ಟದ ನೀರು ಮತ್ತು ನಾಲ್ಕನೇ ದಿನ ಎದೆ ಮಟ್ಟ ಹಾಗೂ ಐದನೇ ದಿನ ಕಂಠ ಮಟ್ಟದ ನೀರಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಲಾಗಿತ್ತು. ಶುಕ್ರವಾರ ವರುಣ ಜಪದ ಜತೆಗೆ ವರುಣ ಹೋಮ ಕೂಡ ನಡೆಯಿತು. ಇವೆರಡು ಒಟ್ಟಾಗಿ ನಡೆದಿರುವುದು ಕೂಡ ಅಪರೂಪದ ಸಂಗತಿಯಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com