ಬ್ರಹ್ಮಾವರ: 8ಕ್ಕೆ ಪತ್ರಿಕಾ ದಿನಾಚರಣೆ

ಬ್ರಹ್ಮಾವರ : ವಲಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರೋಟರಿ ಕ್ಲಬ್‌ ಹಂಗಾರಕಟ್ಟೆ, ಸಾಸ್ತಾನ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಜು. 8ರಂದು ಸಂಜೆ 6.30ಕ್ಕೆ ಸಾಸ್ತಾನ ರೋಟರಿ ಭವನದಲ್ಲಿ ನಡೆಯಲಿದೆ.

ರೋಟರಿ ಅಧ್ಯಕ್ಷ ಆನಂದ್‌ ಎಂ., ಡಿವೈಎಸ್‌ಪಿ ಪ್ರಭುದೇವ ಮಾನೆ, ಹಿರಿಯ ಪರ್ತಕರ್ತ ಮುನಿಯಾಲು ಗಣೇಶ ಶೆಣೈ, ಉಡುಪಿ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಕಿರಣ್‌ ಮಂಜನಬೈಲು, ಬ್ರಹ್ಮಾವರ ವಲಯದ ಅಧ್ಯಕ್ಷ ಪ್ರಭಾಕರ ಆಚಾರ್ಯ ಮೊದಲಾದವರು ಉಪಸ್ಥಿತರಿರುವರು.

ಈ ಸಂದರ್ಭ ಹಿರಿಯ ಪತ್ರಿಕಾ ವಿತರಕ ರಮೇಶ ಉಡುಪರನ್ನು ಗೌರವಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com