ಮಂಗಳೂರು: ಪಿ. ಜಯರಾಮ ಭಟ್ ಅವರು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಮಂಗಳವಾರ ಐದು ವರ್ಷ ಪೂರ್ಣಗೊಳಿಸಿದರು.
14-7-2009ರಂದು ಅವರು ಈ ಅಧಿಕಾರ ಸ್ವೀಕರಿಸಿದ್ದರು. ಅವರ ಈ ಅಧಿಕಾರಾವಧಿಯಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ 32 ಸಾವಿರ ಕೋಟಿ ರೂ.ನಿಂದ 70,300 ಕೋಟಿ ರೂ.ಗೆ ವೃದ್ಧಿಸಿತು. ದುಪ್ಪಟ್ಟಿಗಿಂತಲೂ ಹೆಚ್ಚಾಯಿತು.
ಠೇವಣಿ 42,250 ಕೋಟಿ ರೂ. (21,000 ಕೋಟಿ ರೂ.); ಮುಂಗಡ 28,000 ಕೋಟಿ ರೂ. (11,000 ಕೋಟಿ ರೂ.), ಗ್ರಾಹಕರ ಸಂತೃಪ್ತಿ, ಐಟಿ ಸಾಧನೆ, ಅಪಾಯ ನಿರ್ವಹಣೆ, ವಿತ್ತೀಯ ಸೇರ್ಪಡೆ, ಸಾಮಾಜಿಕ ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಬ್ಯಾಂಕ್ ಅನೇಕ ಪ್ರಶಸ್ತಿಗಳಿಗೆ ಪಾತ್ರವಾಗಿದೆ.
ಗ್ರಾಹಕರಿಗೆ ಅನುಕೂಲಕರವಾದ ತಾಂತ್ರಿಕ ಆಧಾರಿತ ಯೋಜನೆಗಳನ್ನು ಅನುಷ್ಠಾನಿಸಿದೆ. ಗ್ರಾಹಕ ಸ್ನೇಹಿ ಕೆಬಿಎಲ್-ಮಾಗೇìಜ್, ಮಹಿಳಾ ಉದ್ಯೋಗ್, ತತ್ಕ್ಷಣ ಕೃಷಿ ಮುಂಗಡ, ಹೋಂ ಕಂಫರ್ಟ್ ವ್ಯವಹಾರ ಮಿತ್ರ ಮುಂತಾದ ಯೋಜನೆ ಯಶಸ್ವಿಯಾಗಿದೆ.
ಮುಂದಿನ ಮಾರ್ಚ್ ಅಂತ್ಯದೊಳಗೆ ಕರ್ಣಾಟಕ ಬ್ಯಾಂಕ್ ಭಟ್ ಅವರ ನೇತೃತ್ವದಲ್ಲಿ 83 ಸಾವಿರ ಕೋಟಿ ರೂ. ಒಟ್ಟು ವ್ಯವಹಾರ ಗುರಿ ಹೊಂದಿದೆ.
1 comments:
Very good post thanks a lot for sharing with us....
Post a Comment