ಅಂಪಾರು ರೋಟರಿಯ ಪದಗ್ರಹಣ

ಕುಂದಾಪುರ: ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿಯು ತನ್ನ ಸಾಮಾಜೀಕ ಕಾರ್ಯಕ್ರಮಗಳ ಮೂಲಕ ಇಂದು ಗ್ರಾಮೀಣ ಮಟ್ಟದಲ್ಲಿಯೂ ಗುರುತಿಸಿಕೊಂಡಿದೆ. ಈ ಸಂಸ್ಥೆಯು ಮನುಷ್ಯನ ಜೀವನದ ಮೌಲ್ಯವನ್ನು ಕಲಿಸಿಕೊಡುತ್ತಿದೆ. ಸಮಾಜದಲ್ಲಿ ಸಾವಿರಾರೂ ಜೀವಿಗಳಿವೆ. ಈ ಜೀವಿಗಳಲ್ಲಿ ವಿಶೇಷವಾದ ಜೀವಿ ಜೇನು ನೂಣಗಳು. ಈ ಜೇನು ನೂಣಗಳ ರೀತಿಯಲ್ಲಿ ಅಂಪಾರು ರೋಟರಿ ಕ್ಲಬ್‌ನ ಸದಸ್ಯರು ಎಂದು ಮಾನವ ಹಕ್ಕು ಪರಿಷತ್‌ ರಾಷ್ಟ್ರೀಯ ಒಕ್ಕೂಟದ ಉಡುಪಿ ಜಿಲ್ಲಾ ಅಧ್ಯಕ್ಷ ಉದಯ ಕುಮಾರ ಶೆಟ್ಟಿ ಇನ್ನ ಅವರು ಹೇಳಿದರು.

ಅವರು ಮುಳ್ಳುಗುಡ್ಡೆ ಶ್ರೀ ದುರ್ಗಾರೇಣುಕಾ ಗೇರು ಬೀಜ ಕಾರ್ಖಾನೆಯಲ್ಲಿ ಗುರುವಾರ ನಡೆದ ಅಂಪಾರು ರೋಟರಿ ಕ್ಲಬ್‌ನ ಪದ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ರೋಟರಿ ಸಂಸ್ಥೆಯಲ್ಲಿ ಭಾರತೀಯ ಸಂಸðತಿಯಾದ ಜೀವನದ ಮೌಲ್ಯವನ್ನು ಸಾರುವ ಧೇಯೋದ್ದೇಶಗಳನ್ನು ಹೊಂದಿದೆ. ರೋಟರಿ ಸದಸ್ಯರು ಪ್ರತಿಯೋಬ್ಬರನ್ನು ನಾಯಕರನ್ನಾಗಿ ಮಾಡುತ್ತಾರೆ. ಆದರೆ ರೋಟರಿಯು ಎಲ್ಲಿಯೋ ತನ್ನ ಸ್ವಾಹಿತಕ್ಕಾಗಿ ಕೆಲಸ ಮಾಡದೆ, ಸಾಮಾಜಿಕವಾಗಿ ಕೆಲಸ ಮಾಡಿದೆ. ಮನುಷ್ಯ ಜನ್ಮದ ಕರ್ತವ್ಯವನ್ನು ಇಲ್ಲರೂ ಮಾಡುತ್ತಾರೆ.

ಜನ ಸಾಮಾನ್ಯರಾದ ನಮಗೆ ದೇಶಕ್ಕಾಗಿ ಸಾಯುವ ಅವಕಾಶ ಬಂದಿಲ್ಲ. ಸಮಾಜಕ್ಕಾಗಿ ಬದುಕುವ ಅವಕಾಶ ಬಹಳ ಇದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವ ಎಂದು ಹೇಳಿದರು.

ಸಂಘದ ನೂತನ ಅಧ್ಯಕ್ಷ ಭುಜಂಗ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಪಾರು ರೋಟರಿಯು ಗ್ರಾಮೀಣ ಭಾಗದಲ್ಲಿದ್ದರೂ, ರೋಟರಿ ವಲಯದಲ್ಲಿ ತನ್ನದೆ ಆದ ಇತಿಹಾಸವನ್ನು ಹೊಂದಿದೆ. ಈ ಹಿಂದೆ ಕ್ಲಬ್‌ನ ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನದೊಂದಿಗೆ ಅನೇಕ ಜನಪರ ಯೋಜನೆಗಳ ಮೂಲಕ ಕೆಲಸ ನಿರ್ವಸಲಾಗುವುದು. ಶಿಕ್ಷಣ, ರಸ್ತೆ ಸುರಕ್ಷತಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಸಹಾಯಕ ರಾಜ್ಯಪಾಲ ಗಣೇಶ್‌ ಶೆಟ್ಟಿ ಮೊಳಹಳ್ಳಿ ಅವರು ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪದ ಪ್ರಧಾನ ನೇರವೇರಿಸಿ, ಶುಭ ಹಾರೈಸಿದರು.

ವಲಯ ಸೇನಾನಿ ಶ್ಯಾಮ್‌ ಶೆಟ್ಟಿ ಅವರು ರೋಟರಿ ಪತ್ರಿಕೆ ದರ್ಪಣ ಬಿಡುಗಡೆಗೊಳ್ಳಿಸಿ, ಶುಭಶಂಸನೆಗೈದರು.

ನಿಕಟ ಪೂರ್ವಾಧ್ಯಕ್ಷ ಎಂ. ಸುರೇಂದ್ರ ಶೆಟ್ಟಿ, ನಿಕಟ ಪೂರ್ವ ಕಾರ್ಯದರ್ಶಿ ಎಸ್‌. ಕೃಷ್ಠಪ್ಪ ಶೆಟ್ಟಿ ಮತ್ತು ಮುಂತಾದವರು ಉಪಸ್ಥಿತರಿದರು.

ಈ ಸಂದರ್ಭದಲ್ಲಿ ಕ್ಲಬಿಗೆ ನೂತನವಾಗಿ ಆರು ಜನ ಸದಸ್ಯರು ಸೇರ್ಪಡೆಗೊಂಡರು. ಕ್ಲಬಿನ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತ್ತು. ಕ್ರೀಡಾಪಟು ಪವಿತ್ರ ಅವರನ್ನು ಗೌರವಿಸಲಾಯಿತು.

ರೋಟರಿಯ ಸದಸ್ಯ ಎಂ. ಜಗನ್ನಾಥ ಶೆಟ್ಟಿ ಅವರು ಸ್ವಾಗತಿಸಿದರು. ಕ್ಲಬ್‌ನ ಸದಸ್ಯ ಉದಕೆ.ಎನ್‌. ಆನಂದ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಸತೀಶ್‌ ಕುಮಾರ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com