ಸಿದ್ದಾಪುರ ರೋಟರಿ ಪದಗ್ರಹಣ

ಸಿದ್ದಾಪುರ: ರೋಟರಿ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆ. ಪೋಲಿಯೋ ನಿರ್ಮೂಲನ ಮಾಡಿದ ಸಂಸ್ಥೆ ರೋಟರಿ. ಯಾವುದೇ ಸರಕಾರ ಸಂಸ್ಥೆಯ ಈ ಸಾಧನೆ ಬಗ್ಗೆ ಎಲ್ಲಿಯೂ ಪ್ರಾಸ್ತಾಪನೆ ಮಾಡಲಿಲ್ಲ. ಆದರೆ ರೋಟರಿಯು ಎಲ್ಲಿಯೂ ತನ್ನ ಸ್ವಾಹಿತಕ್ಕಾಗಿ ಕೆಲಸ ಮಾಡದೆ, ಸಾಮಾಜಿಕವಾಗಿ ಕೆಲಸ ಮಾಡಿದೆ ಎಂದು ಆಳ್ವಾಸ್‌ ಎಜುಕೇಷನ್‌ ಸಂಸ್ಥೆಯ ಮುಖ್ಯಸ್ಥ ಡಾ| ಎಂ. ಮೋಹನ್‌ ಆಳ್ವ ಅವರು ಹೇಳಿದರು.
       ಅವರು ಸಿದ್ದಾಪುರ ಬರೆಗುಂಡಿ ಸಣ್ಣಯ್ಯ ಯಡಿಯಾಳ ರೋಟರಿ ಹಾಲ್‌ನಲ್ಲಿ ಶುಕ್ರವಾರ ನಡೆದ ಸಿದ್ದಾಪುರ-ಹೊಸಂಗಡಿಯ ರೋಟರಿ ಕ್ಲಬ್‌ನ ಪದಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
       ಭಾರತವು ಇಂದು ಧನಾತ್ಮಕ ಹಾಗೂ ಋಣತ್ಮಾಕವಾಗಿ ಅನೇಕ ಬದಲಾವಣೆ ಗಳಾಗಿವೆ. ಬಡವ, ಶ್ರೀಮಂತ ಹಾಗೂ ಕೆಲವೊಂದು ಅನಿಷ್ಟ ಪದ್ಧ‌ªತಿಗಳು ಜನರ ನಡುವೆ ಕೆಲವೊಂದು ಅಂತರ ಹಾಗೂ ಕಂದಕಗಳನ್ನು ನಿರ್ಮಿಸಿವೆ. ಇಂತಹ ಅಂತರ ಹಾಗೂ ಕಂದಕಗಳನ್ನು ಮುಕ್ತ ಭಾರತವನಾಗಿಸಿ, ರಾಮರಾಜ್ಯವನ್ನು ನಿರ್ಮಿಸಬೇಕಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ, ಸಾಧು ಸಂತರು, ಸಂಘ ಸಂಸ್ಥೆಗಳು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಹೇಳಿದರು.
    ನೂತನ ಅಧ್ಯಕ್ಷ ಡಾ| ಜಗದೀಶ್‌ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತ ನಾಡಿ, ಸಂಘ ಸಂಸ್ಥೆಗೆ ಸೇರಿದ ಮೇಲೆ ಅದರಲ್ಲಿ ತಮ್ಮನ್ನು ತೋಡಗಿಸಿಕೊಳ್ಳಬೇಕು.  ರೋಟರಿ ವಲಯದಲ್ಲಿ ತನ್ನದೆ ಆದ ಇತಿಹಾಸವನ್ನು ಹೊಂದಿರುವ ಕ್ಲಬ್ ಸಿದ್ದಾಪುರ ರೋಟರಿ ಕ್ಲಬ್‌. ಈ ಕ್ಲಬ್‌ನ ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನ ಹಾಗೂ ಅನೇಕ ಜನಪರ ಯೋಜನೆಗಳ ಮೂಲಕ ಕೆಲಸ ನಿರ್ವಹಿಸಲಾಗುವುದು ಎಂದು ಹೇಳಿದರು.
   ಸಹಾಯಕ ರಾಜ್ಯಪಾಲ ಗಣೇಶ್‌ ಶೆಟ್ಟಿ ಮೊಳಹಳ್ಳಿ ಅವರು ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪದ ಪ್ರದಾನ ನೇರವೇರಿಸಿ, ಶುಭ ಹಾರೈಸಿದರು.ವಲಯ ಸೇನಾನಿ ಶ್ಯಾಮ್‌ ಶೆಟ್ಟಿ ಶುಭಶಂಸನೆಗೈದರು. ನಿಕಟ ಪೂರ್ವಾಧ್ಯಕ್ಷ ಯು. ಉಮೇಶ್‌ ರಾವ್‌, ನಿಕಟ ಪೂರ್ವ ಕಾರ್ಯದರ್ಶಿ ಸುಹಾಸ್‌ ಚಾತ್ರ ಮತ್ತು 
     ಮುಂತಾದವರು ಉಪಸ್ಥಿತರಿದರು.ಈ ಸಂದರ್ಭದಲ್ಲಿ ಕ್ಲಬಿಗೆ ನೂತನವಾಗಿ ಐದು ಜನ ಸದಸ್ಯರು ಸೇರ್ಪಡೆ ಗೊಂಡರು. ಕ್ಲಬ್‌ನ ವಾರಾಹಿ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕ್ಲಬ್‌ನ ವ್ಯಾಪ್ತಿಯ ಎಸ್‌ಎಸ್‌ಎಲ್‌ಸಿಯ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತ್ತು. ಐರಬೈಲು ಸರಕಾರಿ ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಜನ್ಸಾಲೆ ಹರ್ಷ ಅನುದಾನಿತ ಶಾಲೆಗೆ ಶುದ್ಧ ಕುಡಿಯುವ ನೀರಿನ ಅಕ್ವಾಗಾರ್ಡ್‌ ನೀಡಲಾಯಿತ್ತು.ಎಂ. ರಾಘವೇಂದ್ರ ರಾವ್‌ ಸ್ವಾಗತಿಸಿ, 
  ಕ್ಲಬ್‌ನ ಉಪಾಧ್ಯಕ್ಷ ಸಂತೋಷ್‌ ಕುಮಾರ ಶೆಟ್ಟಿ ಹಾಗೂ ಸದಸ್ಯ ಟಿ.ಜಿ. ಪಾಂಡುರಂಗ ಪೈ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಪ್ರದೀಪ ಯಡಿಯಾಳ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com