ರೋಟರಿ ಕ್ಲಬ್‌ ಕುಂದಾಪುರ ಸನ್‌ರೈಸ್‌ ಪದಪ್ರದಾನ

ಕುಂದಾಪುರ: ರೋಟರಿ ಕ್ಲಬ್‌ ಕುಂದಾಪುರ ಸನ್‌ರೈಸ್‌ ಪದಪ್ರಧಾನ ಸಮಾರಂಭವು ಜು.6 ರಂದು ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಜರಗಿತು.

ಸಮಾರಂಭದ ಪದಪ್ರಧಾನ ಅಧಿಕಾರಿಯಾಗಿ ಮಂಗಳೂರು ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ಕಲಾºವಿ ಪ್ರಕಾಶ್‌ರಾವ್‌ ಮಾತನಾಡಿ ಒಬ್ಬ ನಾಯಕನಾದವನು ಸಂಸ್ಥೆಯನ್ನು ಹೇಗೆ ಮುನ್ನಡೆಸಬೇಕೆಂದು ಹೇಳುತ್ತಾ ರೋಟರಿ ಸಂಸ್ಥೆಯು ಸಮಾಜದ ಆರ್ಥಿಕ ಸುಧಾರಣೆಗೆ ಒಂದು ಅಂಗವಾಗಿರುತ್ತದೆ ಎಂದು ಹೇಳಿದರು. ಕ್ಲಬ್‌ನ ನೂತನ ಅಧ್ಯಕ್ಷ ಶ್ರೀನಿವಾಸ ಹಾಗೂ ಸದಸ್ಯರಿಗೆ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಜೆಸಿಐ ಇಂಡಿಯಾ ಫೌಂಡೇಶನ್‌ ನಿರ್ದೇಶಕ ವೈ.ಸುಕುಮಾರ ಅವರು ನೂತನ ಅಧ್ಯಕ್ಷರಿಗೆ ಹಾಗೂ ಸರ್ವಸದಸ್ಯರಿಗೆ ಶುಭಹಾರೈಸಿದರು. ಗಣೇಶ್‌ ಶೆಟ್ಟಿ ಮೊಳಹಳ್ಳಿ ಅವರು ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪದಪ್ರಧಾನ ನೆರವೇರಿಸಿ ಶುಭಸಂಶನೆಗೈದರು.

ಸಮಾರಂಭದಲ್ಲಿ ವಲಯ ಸೇನಾನಿ ವಾಸುದೇವ ಶೇರುಗಾರ್‌,ನಿಕಟಪೂರ್ವ ಕಾರ್ಯದರ್ಶಿ ಸಿ.ಎಚ್‌.ಗಣೇಶ್‌ ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಶ್ರೀನಿವಾಸ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ನಿಕಟಪೂರ್ವ ಅಧ್ಯಕ್ಷ ಬಿ.ಎಂ. ಚಂದ್ರಶೇಖರ್‌ ಸ್ವಾಗತಿಸಿದರು, ಎಲ್‌.ಜೆ.ಫೆರ್ನಾಂಡಿಸ್‌ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಾಮಕೃಷ್ಣ ಐತಾಳ್‌ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com