ಹಂಗಾರಕಟ್ಟೆ ಸಾಸ್ತಾನ ರೋಟರಿ ಪದಗ್ರಹಣ

ಕೋಟ: ಕೇವಲ ಪ್ರಶಸ್ತಿಗಾಗಿ ಹೋರಾಟ ಮಾಡದೆ, ಸಾಮಾನ್ಯ ಜನತೆಗೆ  ಅನುಕೂಲವಾಗುವ  ಹೆಚ್ಚಿನ  ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುವ ಜವಾಬ್ದಾರಿಯನ್ನು ರೋಟರಿ ಮಾಡಲಿ ಎಂದು ಉಡುಪಿ  ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ  ಡಾ.ಜಿ.ಶಂಕರ್‌  ಸಲಹೆ ನೀಡಿದರು.
      ಅವರು ಮಾಬುಕಳದ ಚೇತನಾ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‌ ಪದಗ್ರಹಣ  ಸಮಾರಂಭದಲ್ಲಿ  ಮಾತನಾಡಿದರು.
     ರೋಟರಿಯಂಥ ಸಮಾಜ ಸೇವಾ ಸಂಸ್ಥೆಗಳು ಹಿಂದುಳಿದ ಬಡವರ ಪರವಾಗಿ ಕೆಲಸ ಮಾಡಿ ಅವರ ಅಭಿವೃದ್ಧಿಗೆ  ಶ್ರಮಿಸಬೇಕು ಎಂದರು.
   ರೋಟರಿ ವಲಯ 2ರ ಸಹಾಯಕ ಗವರ್ನರ್‌ ದಿನೇಶ್‌ ಹೆಗ್ಡೆ ಆತ್ರಾಡಿ ಮಾತನಾಡಿ ರೋಟರಿಯ ಪಲ್ಸ್‌ ಪೋಲಿಯೋದಂತಹ ಹಲವಾರು ಕಾರ್ಯಕ್ರಮಗಳು ಜಾಗತಿಕ ಮಟ್ಟದಲ್ಲಿ ಹೆಸರು  ಗಳಿಸಿದೆ.  ವನಮಹೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆಯ ಜಾಗƒತಿ ಮೂಡಿಸುತ್ತಿದೆ  ಎಂದರು.
     ರೋಟರಿ 3180ರ ಮಾಜಿ ಜಿಲ್ಲಾ ಗವರ್ನರ್‌ ಸದಾನಂದ ಚಾತ್ರ  ಪದಾಧಿಕಾರಿಗಳಿಗೆ  ಪದಪ್ರದಾನ ನೆರವೇರಿಸಿದರು.
     ರೋಟರಿ ಕ್ಲಬ್‌ನ ಅಧ್ಯಕ್ಷ ಆನಂದ್‌ ಎಂ ಅಧ್ಯಕ್ಷತೆ ವಹಿಸಿದ್ದರು. ಇದೇ  ಸಂದರ್ಭ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕೊರಗ ಸಮುದಾಯದ ವಿದ್ಯಾರ್ಥಿನಿ ಸ್ನೇಹಾ ಹಾಗೂ ಚೇತನಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ್‌ ಜಿ. ಮತ್ತು ಪರಿಸರದ ಶಾಲೆಗಳ 10ಕ್ಕೂ ಹೆಚ್ಚು  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಯಿತು. ಗೌರವಿಸಲಾಯಿತು.
     ಶಿಕ್ಷಕ ನರೇಂದ್ರ ಕುಮಾರ್‌ ಅವರ ಸಂಪಾದಕತ್ವದಲ್ಲಿ ಹೊರತಂದ ಹಂಸ ಕಿರು ಹೊತ್ತಿಗೆಯನ್ನು ದಿನೇಶ್‌ ಹೆಗ್ಡೆ ಬಿಡುಗಡೆಗೊಳಿಸಿದರು. ರೋಟರಿಗೆ ಡಾ. ಮಹಾಬಲ, ವಿದ್ವಾನ್‌ ವಿಜಯ ಮಂಜರ್‌, ಶಿವರಾಮ ಶ್ರೀಯಾನ್‌, ಚಂದ್ರ, ವಿನೋದ್‌ ಕುಮಾರ್‌, ಮಲ್ಲಿಕಾ ಬಿ. ಪೂಜಾರಿ ಮತ್ತು ಸುಲತಾ ಹೆಗ್ಡೆ  ಸದಸ್ಯರಾಗಿ  ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ರೋಟರಿ ವಲಯ 2ರ ಪಿ.ಬಾಲಕೃಷ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
   ನಿರ್ಗಮಿತ ಅಧ್ಯಕ್ಷ ಪಿ.ಸಿ ಹೊಳ್ಳ ಸ್ವಾಗತಿಸಿ, ಕಾರ್ಯದರ್ಶಿ ಯಶೋದಾ ಸಿ ಹೊಳ್ಳ ವರದಿ ವಾಚಿಸಿ, ನರೇಂದ್ರ ಕುಮಾರ್‌ ಕೋಟ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ರಾಜಾರಾಮ್‌ ಐತಾಳ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com