ಬಾರ್ಕೂರು:ಎಸ್‌ಸಿಡಿಸಿಸಿ ಬ್ಯಾಂಕ್‌ 75ನೇ ಶಾಖೆ ಉದ್ಘಾಟನೆ

ಬಾರ್ಕೂರು: ಗ್ರಾಹಕರನ್ನು ಆತ್ಮೀಯತೆಯಿಂದ ಆಹ್ವಾನಿಸಿ, ಅವರ ಅಗತ್ಯಗಳನ್ನು ಅರಿತು ಪೂರೈಸುವುದೇ ಸಹಕಾರ ಸಂಘದ ಉದ್ದೇಶ. ಇಲ್ಲಿ ಹಣಕ್ಕಿಂತ ಹೃದಯಶ್ರೀಮಂತಿಕೆ ಮುಖ್ಯವಾಗಿರುತ್ತದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

ಅವರು ಬಾರ್ಕೂರಿನ ದಿ ಪ್ಯಾಲೇಸ್‌ ಕಮರ್ಶಿಯಲ್‌ ಪ್ಲಾಜಾದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ 75ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜರು ಆಳಿದ, ತುಳು ಸಂಸ್ಕೃತಿಯ ಹೆಬ್ಟಾಗಿಲು ಆದ, ಅಳಿಯ ಕಟ್ಟಿನ ಸ್ವರೂಪ ನೀಡಿದ ಬಾರಕೂರಿನಲ್ಲಿ ನಮ್ಮ ಶಾಖೆಯನ್ನು ಉದ್ಘಾಟಿಸುವ ಮೂಲಕ ಜನತೆಯ ಸ್ವಾವಲಂಬಿ ಜೀವನಕ್ಕೆ ಕಾರಣಕರ್ತರಾಗುವ ಅವಕಾಶ ದೊರೆತಿದೆ ಎಂದರು.

ವಿಭಿನ್ನ ಸೇವೆ

ಠೇವಣಿ ಸಂಗ್ರಹಿಸಿ ಸಾಲ ನೀಡುವುದಕ್ಕೆ ಸೀಮಿತವಾಗದೆ ತ್ವರಿತ ಹಣ ರವಾನೆ, ಕಿಸಾನ್‌ ಕ್ರೆಡಿಟ್‌ ಕಾರ್ಟ್‌ ಇನ್ನಿತರ ವಿನೂತನ ಯೋಜನೆ ರೂಪಿಸಿದ ಎಸ್‌ಸಿಡಿಸಿಸಿ ಬ್ಯಾಂಕ್‌ ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೂ ಕಾರ್ಡ್‌ ನೀಡಿಕೆ, ಮೊಬೈಲ್‌ ಬ್ಯಾಂಕಿಂಗ್‌ನಂತಹ ವಿಭಿನ್ನ ಸೇವೆಗಳನ್ನು ನೀಡಲಿದೆ ಎಂದು ಡಾ| ರಾಜೇಂದ್ರ ಕುಮಾರ್‌ ಹೇಳಿದರು.

ಬಾಕೂìರು ವ್ಯವಸಾಯ ಸೇ.ಸ. ಸಂಘದ ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ ಭದ್ರತಾ ಕೋಶ ಉದ್ಘಾಟಿಸಿದರು. ಬಾರ್ಕೂರು ಸೈಂಟ್‌ ಪೀಟರ್ ಚರ್ಚ್‌ನ ರೆ|ಫಾ| ವೆಲೆರಿಯನ್‌ ಮೆಂಡೊನ್ಸಾ ಅವರು ಗಣಕೀಕರಣ ಉದ್ಘಾಟಿಸಿದರು.

ಅತಿಥಿಗಳಾಗಿ ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಎಸ್‌. ರಾಜು ಪೂಜಾರಿ, ರಾಜೇಶ್‌ ರಾವ್‌, ಸ್ಥಳೀಯ ಸಹಕಾರ ಸಂಘಗಳ ಅಧ್ಯಕ್ಷರಾದ ಬ್ರಹ್ಮಾವರದ ಇರ್ಮಾಡಿ ತಿಮ್ಮಪ್ಪ ಹೆಗ್ಡೆ, ಶಿರಿಯಾರದ ಪ್ರದೀಪ್‌ ಬಲ್ಲಾಳ್‌, ಸಾಸ್ತಾನದ ಪ್ರತಾಪ್‌ ಶೆಟ್ಟಿ, ಮಂದಾರ್ತಿಯ ಎಚ್‌. ಗಂಗಾಧರ ಶೆಟ್ಟಿ, ಉಪ್ಪೂರಿನ ಎನ್‌. ರಮೇಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಥಮ ಠೇವಣಿ ಪತ್ರ, ಪಾಸ್‌ ಬುಕ್‌, ಸಾಲ ಪತ್ರ, ಲಾಕರ್‌ ಕೀ ಗ್ರಾಹಕರಿಗೆ ಹಸ್ತಾಂತರಿಸಲಾಯಿತು. ನೂತನ ನವೋದಯ ಸಂಘಗಳನ್ನು ಉದ್ಘಾಟಿಸಲಾಯಿತು. ವಿಮಾ ಯೋಜನೆ ಚೆಕ್‌ ಹಸ್ತಾಂತರಿಸಲಾಯಿತು. ಅದೃಷ್ಟ ಬಹುಮಾನ ಪ್ರಕಟಿಸಲಾಯಿತು.

ಸಮಾರಂಭದಲ್ಲಿ ಶಾಖಾ ಕಟ್ಟಡದ ಮಾಲಕ ಜೆರಾಲ್ಡ್‌ ಗೊನ್ಸಾಲ್ವಿಸ್‌, ಶಾಖಾ ವ್ಯವಸ್ಥಾಪಕ ವರದರಾಜ್‌ ಎನ್‌. ಶೆಟ್ಟಿ, ನವೋದಯ ಸ್ವ ಸಹಾಯ ಸಂಘದ ಪ್ರೇರಕರನ್ನು, ಸಿಬಂದಿಯನ್ನು ಗೌರವಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಿಶನ್‌ ಹೆಗ್ಡೆ ಕೊಳ್ಕೆಬೈಲು ಸ್ವಾಗತಿಸಿ, ವಿಜಯ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com