ಚಿಂತನಾಶೀಲ ಶಿಕ್ಷಕರು ಸಮಾಜದ ಆಸ್ತಿ

ತೆಕ್ಕಟ್ಟೆ: ಶಿಕ್ಷಕರು ಮಾತೃ ಭಾಷೆಯನ್ನು ಅರಿತುಕೊಂಡು ಇತರ 'ಷಯಗಳ ಆಂತರ್ಯವನ್ನು ಅಭಿವ್ಯಕ್ತಿಸುವ ಬಗ್ಗೆ ಶಿಕ್ಷಕರು ಅಧ್ಯಯನಶೀಲರಾಗಬೇಕಾದ ಅನಿವಾರ್ಯತೆ ಇದೆ ಈ ನಿಟ್ಟಿನಲ್ಲಿ ಸಮಾಜ ಶಿಕ್ಷಕರಿಂದ ಏನೋ ಬಯಸುತ್ತಿದೆ ಇದಕ್ಕೆ ಪೂರಕವಾಗಿ ಚಿಂತನೆ ಮಾಡಬೇಕಾದ ಅಗತ್ಯತೆ ಇದೆ ಎಂದು ಕುಂದಾಪುರ ಎಚ್‌ ಎಮ್‌ ಎಮ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಚಿಂತನಾ ರಾಜೇಶ್‌ ಹೇಳಿದರು

ಅವರು ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಿಕ್ಷಕರ ಕಾರ್ಯಗಾರವನ್ನು ಉದ್ಧೇಶಿಸಿ ಮಾತನಾಡಿದರು.

ಮಗುವಿನ ಪಾಲಕರು ಹಾಗೂ ಸಮಾಜ ಶಿಕ್ಷಕರಿಂದ ತನ್ನ ಮಗು ಡಾಕ್ಟರ್‌, ಇಂಜಿನಿಯರ್‌ ಆಗಬೇಕು ಎನ್ನುವ ಹಂಬಲ ಹೊತ್ತುಕೊಂಡಿದ್ದಾರೆ ಈ ನಿಟ್ಟಿನಲ್ಲಿ ಶಿಕ್ಷಕರು ಬದಲಾದ ಇಂದಿನ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡು ಸಾಮೂಹಿಕವಾಗಿ ವಿಚಾರ ವಿನಿಮಯ ಮಾಡಿಕೊಳ್ಳುವುದ್ದರೊಂದಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾಗಿದೆ. ಒಟ್ಟಿನಲ್ಲಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕಾಗಿದೆ , ಸಾಂಪ್ರದಾಯಿಕ ಶೆ„ಲಿಯ ಶಿಕ್ಷಣ ಪದ್ಧತಿಯ ಜೊತೆಗೆ ಸೌಂದರ್ಯ ಕಲ್ಪನೆ ಮೂಲಕ ಮಗುವಿನ ಭಾವನೆಯನ್ನು ಅರಿತುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ಮೆನೇಜಿಂಗ್‌ ಟ್ರಸ್ಟಿ ಎಂ.ದಿನಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ಶೆ„ಕ್ಷಣಿಕ ನಿರ್ದೇಶಕ ಡಾ| ಸುರೇಶ್‌ ಶೆಟ್ಟಿ ಎಕ್ಕಾರ್‌, ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ನಾಗರತ್ನ.ಎನ್‌.ಪಾಲನ್‌ ಹಾಗೂ ಶಿಕ್ಷಕ ವೃಂದ ಹಾಜರಿದ್ದರು|
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com