ಪಿಎಚ್‌ಡಿ, ಎಂಫಿಲ್‌ ಗ್ರಂಥಗಳಿಗೆ ಧನಸಹಾಯ

ಉಡುಪಿ: ಸೃಜನೇತರ ಪ್ರಕಾರಕ್ಕೆ ಸೇರಿದ 2013ನೇ ಸಾಲಿನಲ್ಲಿ ಪ್ರಕಟವಾದ ಜಾನಪದ, ವೈಜ್ಞಾನಿಕ, ಐತಿಹಾಸಿಕ, ಸಾಂಸ್ಕೃತಿಕ, ಪ್ರವಾಸ ಕಥನ ಮತ್ತು ವ್ಯಕ್ತಿ ವಿಶೇಷ ಕುರಿತ ಸಾಹಿತ್ಯಕ ಮೌಲ್ಯವುಳ್ಳ ವಿಮಶಾìತ್ಮಕ ಕನ್ನಡ ಗ್ರಂಥಗಳಿಗೆ, 2013-14ನೇ ಸಾಲಿನಲ್ಲಿ ಯಾವುದೇ ವಿ.ವಿ.ಗಳಿಂದ ಕನ್ನಡದಲ್ಲಿ ಪಿ.ಎಚ್‌.ಡಿ. ಮತ್ತು ಎಂಫಿಲ್‌ ಪದವಿ ಪಡೆದ ಮಹಾಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಧನಸಹಾಯ ನೀಡುವ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ಅರ್ಜಿ ನಮೂನೆ, ನಿಯಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯಾ ಜಿಲ್ಲಾ ಸಹಾಯಕ ನಿರ್ದೇಶಕರು (ಡಾ| ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿ ನಗರ, ಅಲೆವೂರು, ಉಡುಪಿ, ದೂ: 0820-2575552; ಜನತಾ ಬಜಾರ್‌ ಕಟ್ಟಡ, ಹಂಪನಕಟ್ಟ, ಮಂಗಳೂರು- ದೂ: 0824-2441527) ಇವರಿಂದ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಜು. 31 ಕೊನೆಯ ದಿನಾಂಕ ಎಂದು ಇಲಾಖೆ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com