ಉಪ್ರಳ್ಳಿಯಲ್ಲಿ ರಾಜ್ಯ ಮಟ್ಟದ ವೈದಿಕ ಸಮಾವೇಶ

ಕುಂದಾಪುರ: ಸನಾತನ ಪರಂಪರೆಯಿಂದಲೂ ವಿಶ್ವಕರ್ಮರು ಬ್ರಾಹ್ಮಣ್ಯತ್ವವನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ವಿಶ್ವಕರ್ಮರು ಎಂದೆಂದಿಗೂ ಬ್ರಾಹ್ಮಣ ವರ್ಗದವರು. ಆದರೆ ಕೆಲವೊಂದು ಪಟ್ಟಭದ್ರ ಹಿತಾಸಕ್ತರು ವಿಶ್ವಕರ್ಮರು ಬ್ರಾಹ್ಮಣರಲ್ಲ ಎಂದು ಆಪಪ್ರಚಾರ ನಡೆಸುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ವೈದಿಕ ಸಮಾವೇಶವು ಅಪಪ್ರಚಾರದವರಿಗೆ ಒಂದು ಸಂದೇಶ ಎಂದು ಆನೆಗುಂದಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಯವರು ಹೇಳಿದರು.
   ಅವರು ವೇದ ಸಂಜೀವಿನಿ ಸಭಾ ಉಡುಪಿ ಮತ್ತು ಪ್ರಾಕ್ತನ ವಿದ್ಯಾರ್ಥಿ ವೃಂದ ವಿ.ಬಿ.ಎಸ್‌. ವಿದ್ಯಾಪೀಠ ಕೊಡಂಕೂರು ಉಡುಪಿ ಇವರ ಸಹಭಾಗಿತ್ವದಲ್ಲಿ ಬುಧವಾರ ಶ್ರೀ ಕ್ಷೇತ್ರ ಉಪ್ರಳ್ಳಿಯ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಜು.23ರಂದು ರಾಜ್ಯ ಮಟ್ಟದ ವೈದಿಕ ಸಮಾವೇಶವನ್ನು ಉದ್ಘಾಟಿಸಿ, ಆಶೀರ್ವಚನ ಗೈದು ಮಾತನಾಡಿದರು.
   ಸಮಾಜ, ಗುರುಪೀಠ ಹಾಗೂ ವೈದಿಕರು ಒಟ್ಟಾಗಿ ವೈದಿಕ ಸಮಾವೇಶ ಮಾಡಿದಾಗ ಮಾತ್ರ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ. ವೈದಿಕರು ಹಾಗೂ ಪುರೋಹಿತರು ಸಮಾಜಕ್ಕೆ ಪೂರಕ‌ವಾಗಿರಬೇಕು. ಈ ಚಾತುರ್ಮಾಸದ ಈ ಸಂರ್ಭದಲ್ಲಿ ಈ ಮೂವರು ಒಟ್ಟಾಗಿ ರಾಜ್ಯ ಮಟ್ಟದ ವೈದಿಕ ಸಮಾವೇಶ ನಡೆಸುತ್ತಿರುವುದರಿಂದಾಗಿ ನಮ್ಮ ಪೀಠಕ್ಕೂ ಒಂದು ಗೌರವವಾಗಿದೆ. ವಿಶ್ವಕರ್ಮರು ಕನ್ಯಾ ಸಂಕ್ರಮಣದಂದು ವಿಶ್ವಕರ್ಮ ಪೂಜಾ ಮಹೋತ್ಸವವನ್ನು ನಡೆಸಬೇಕು ಎಂದು ಹೇಳಿದರು.
   ಶ್ರೀ ಕ್ಷೇತ್ರ ಉಪ್ರಳ್ಳಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ ತ್ರಾಸಿ ಮಾತನಾಡಿ, ವಿಶ್ವಕರ್ಮ ಸಮಾಜದ ಪರಿವರ್ತನೆಯಲ್ಲಿ ವೈದಿಕರ ಪಾತ್ರ ಮಹತ್ವದಾಗಿದೆ. ಪ್ರತೀ ಮನೆಗಳಲ್ಲಿ ವಿಶ್ವ ಬ್ರಾಹ್ಮಣರ ಸಂಸðತಿ ಮೂಡಿಬರಬೇಕು ಎಂದು ಹೇಳಿದರು.
   ಕುಂದಾಪುರ ತಾಲೂಕು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಮಾತನಾಡಿ, ರಾಜ್ಯದಾದ್ಯಂತ ವಿಶ್ವಕರ್ಮರು ಒಂದೇ ದಿನ ವಿಶ್ವಕರ್ಮ ಪೂಜಾಮಹೋತ್ಸವವನ್ನು ಆಚರಿಸುವಂತಾಗಬೇಕು. ಮತ್ತು ಸರಕಾರ ಆ ದಿನವೇ ಸರಕಾರಿ ರಜೆ ಘೋಷಣೆ ಮಾಡಬೇಕು ಎಂದು ಹೇಳಿದರು.
    ವೇದ ಸಂಜೀವಿನಿ ಸಭಾ ಉಡುಪಿ ಇದರ ಅಧ್ಯಕ್ಷ ವೇದಮೂರ್ತಿ ಲಕ್ಷ್ಮೀಕಾಂತ ಶರ್ಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
    ತಾಡಿಚರ್ಲ ಶ್ರೀ ವೀರ ರಾಘವ ಶರ್ಮಾ ಬಳ್ಳಾರಿ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪ್ರಧಾನ ಆರ್ಚಕ ವೇದಬ್ರಹ್ಮಶ್ರೀ ಉಮೇಶ ತಂತ್ರಿ, ಬೆಂಗಳೂರು ಶ್ರೀ ಶನೇಶ್ವರ ದೇವಸ್ಥಾನದ ಪ್ರಧಾನ ಆರ್ಚಕ ವೇದಬ್ರಹ್ಮ ಡಿ. ನರಸಿಂಹ ಆಚಾರ್ಯ, ಮೂಡುಬಿದ್ರೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಪ್ರಧಾನ ತಂತ್ರಿ ಕೇಶವ ಪುರೋಹಿತ್‌, ಬಾಕೂìರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಅಲೆವೂರು ಯೋಗೀಶ್‌ ಆಚಾರ್ಯ, ವೇದಬ್ರಹ್ಮಶ್ರೀ ರೋಹಿತಾಕ್ಷ ಪುರೋಹಿತ್‌ ಮತ್ತು ಮುಂತಾದವರು ಉಪಸ್ಥಿತರಿದರು.
     ನಂತರ ವೇದಗಳಲ್ಲಿ ಶಿಲ್ಪ ಮತ್ತು ಬ್ರಾಹ್ಮಣ್ಯ ಇದರ ಕುರಿತು ಉಪನ್ಯಾಸನ ಕಾರ್ಯಕ್ರಮ ಜರಗಿತು. ವಿದ್ವಾನ್‌ ದಿವಕರ ಅಗ್ನಿ ಹೋತ್ರ ಪುತ್ತೂರು ಸ್ವಾಗತಿಸಿದರು. ವಿದ್ವಾನ್‌ ಚಂದ್ರಕಾಂತ ಶರ್ಮಾ ಹೆಬ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್‌ ಚಂದ್ರೇಶ್‌ ಶರ್ಮಾ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್‌ ಪ್ರಕಾಶ ಶರ್ಮಾ ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com