ಕೋಟೇಶ್ವರ: ರೋಟರಿ ಪದ ಪ್ರಧಾನ ಸಮಾರಂಭ

ಕೋಟೇಶ್ವರ: ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್‌ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸಿ ಕೀರ್ತಿ ಶಿಖರಕ್ಕೇರಿಸಿದೆ. ಸೇವಾ ಕೈಂಕರ್ಯದೊಡನೆ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಒತ್ತು ಕೊಟ್ಟು ಓರ್ವ ಸುಸಂಸ್ಕೃತ ನಾಗರಿಕರಾಗಿ ಸಮಾಜಮುಖೀ ಕಾರ್ಯದಲ್ಲಿ ತಮ್ಮನ್ನು ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದಕ್ಕೆ ರೋಟರಿ ಸಂಸ್ಥೆಯ ಕಾರ್ಯಕ್ರಮಗಳೇ ಸಾಕ್ಷಿ. ನಮ್ಮ ದೇಶದ ಸಂಸ್ಕೃತಿಯನ್ನು ಇಡೀ ಜಗತ್ತೇ ನೋಡುತ್ತಿದೆ. ನಮ್ಮ ದೇಶದ ಪ್ರತಿಯೊಂದು ಆಚಾರ ವಿಚಾರಗಳನ್ನು ವಿದೇಶಿಯರು ನೋಡಿ ಕಲಿಯುತ್ತಿದ್ದಾರೆ. ಅಂತಹ ಶ್ರೇಷ್ಟ ದೇಶ ನಮ್ಮದು ಎಂದು ಕರ್ನಾಟಕ ರಾಜ್ಯ ಮೆಂಟಲ್‌ ಹೆಲ್ತ್‌ ಟಾಸ್ಕ್ ಪೋರ್ಸ್‌ ನಿರ್ದೇಶಕ ಡಾ. ಕೆ. ಎ. ಆಶೋಕ ಪೈ ಹೇಳಿದರು.

ಅವರು ಶನಿವಾರ ರಾತ್ರಿ ಕೋಟೇಶ್ವರದ ಮೆಜಿಸ್ಟಿಕ್‌ ಕಲ್ಯಾಣ ಮಂಟಪದಲ್ಲಿ ಕೋಟೇಶ್ವರ ರೋಟರಿ ಕ್ಲಬ್‌ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ವಲಯ 1ರ ಅಸಿಸ್ಟೆಂಟ್‌ ಗವರ್ನರ್‌ ಗಣೇಶ್‌ ಶೆಟ್ಟಿ ಮೊಳಹಳ್ಳಿ ಅವರು ನೂತನ ಅಧ್ಯಕ್ಷ ಟಿ. ಗಣೇಶ್‌ ಆಚಾರ್ಯ ತೆಕ್ಕಟ್ಟೆ ಅವರಿಗೆ ಪದಪ್ರಧಾನ ಮಾಡಿ ರೋಟರಿ ಸಂಗಮ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಜೋನಲ್‌ ಲೆಪ್ಟಿನೆಂಟ್‌ ಕೆ.ಕೆ. ಕಾಂಚನ್‌ ವಾರ್ಷಿಕ ಕ್ಯಾಲೆಂಡರ್‌ ಅನಾವರಣಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಟಿ. ಗಣೇಶ್‌ ಆಚಾರ್ಯ ವಹಿಸಿ ರೋಟರಿಯ ವಿವಿಧ ಯೊಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸರ್ವ ಸದಸ್ಯರ ಸಹಕಾರ ಕೋರಿದರು.

ಇದೇ ಸಂದರ್ಭದಲ್ಲಿ ವೈದ್ಯಕೀಯ ಸಹಾಯಧನ ಮತ್ತು ವಿಧ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ್‌ ಕುಂಭಾಸಿ ಸ್ವಾಗತಿಸಿದರು. ರವೀಂದ್ರ ನಾವಡ ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ನಾಗೇಶ ಶೆಟ್ಟಿಗಾರ್‌ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com