ಬೈಂದೂರು ವಲಯದ ಧ್ವನಿ ಬೆಳಕು ಸಂಘದ ಮಹಾಸಭೆ

ಬೈಂದೂರು: ಉಪ್ಪುಂದದ ಶಂಕರ ಕಲಾಮಂದಿರದಲ್ಲಿ ಬೈಂದೂರು ವಲಯದ ಧ್ವನಿ ಬೆಳಕು ಸಂಘದ 3ನೇ ವಾರ್ಷಿಕ ಮಹಾಸಭೆಯು ಜರಗಿತು. ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯಕುಮಾರ್ ಇವರು ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಧ್ವನಿ ಬೆಳಕು ಸಂಘದ ಪದಾಧಿಕಾರಿಗಳಿಗೆ ಮತ್ತು ಎಲ್ಲಾ ವರ್ಗದ ಕಾರ್ಮಿಕರಿಗೆ ಉಚಿತ ಅಫಘಾತ ವಿಮಾ ಪಾಲಿಸಿಯನ್ನು ವಿತರಣೆ ಮಾಡಿದರು. ಮುಂದಿನ 3 ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಕೋಶಾಧಿಕಾರಿ ಗಣೇಶ ದೇವಾಡಿಗ, ವರ್ಧಮಾನ್ ಮೇಘಾಟೆಕ್ ಮಂಗಳೂರು ಇದರ ನಿರ್ದೇಶಕರಾದ ಸತ್ಯಜಿತ್, ಬೈಂದೂರು ವಲಯ ಅಧ್ಯಕ್ಷ ಶಶಿಧರ ಶೆಣೈ ಹಾಗೂ ಹಿರಿಯ ನಿರ್ವಾಹಕ ಅಣ್ಣಪ್ಪಯ್ಯ ಕಾರಂತ ಸಭೆಯಲ್ಲಿ ಉಪಸ್ಥಿತರಿದ್ದರು. ಬೈಂದೂರು ವಲಯದ ಕಾರ್ಯದರ್ಶಿ ವಿನಾಯಕ ಪ್ರಭು ಘತ ವರ್ಷದ ಲೆಕ್ಕ ಪತ್ರ ಮಂಡಿಸಿದರು. ಹೊಸ ಸದಸ್ಯರ ನೊಂದಾವಣಿ ಸೇರ್ಪಡೆ ಮಾಡಲಾಯಿತು. ಸಂಘದ ಎಲ್ಲಾ ಸದಸ್ಯರು ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.
     ಜಿಲ್ಲಾ ಸಮಿತಿಯ ಸದಸ್ಯ ಉದಯ ಆಚಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಬೈಂದೂರು ವಲಯ ಅಧ್ಯಕ್ಷ ಶಶಿಧರ ಶೆಣೈ ಸ್ವಾಗತಿಸಿದರು. ಪ್ರಭಾಕರ ದೇವಾಡಿಗ ವಂದಿಸಿದರು.  

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com