ಕುಂದಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಹಾಲಾಡಿ ಸರಕಾರಿ ನಪ.ಪೂ.ಕಾಲೇಜು ಇಲ್ಲಿನ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮ ಜರಗಿತು.
ಮುಖ್ಯ ಶಿಕ್ಷಕಿ ರೋಶನ್ ಬೀಬಿ ಅಧ್ಯಕ್ಷತೆ ವಹಿಸಿದ್ದರು. ಹಾಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಚ್.ಶೋಭಾ ಆರೋಗ್ಯ ಮಾಹಿತಿ ನೀಡಿದರು. ಶಾಲಾ ಧನ್ವಂತರಿ ಆರೋಗ್ಯ ಕೂಟದ ಅಧ್ಯಕ್ಷ ಶಿಕ್ಷಕ ಶ್ರೀಪತಿ ಐತಾಳ , ಕಾರ್ಯದರ್ಶಿ ಪದ್ಮಾವತಿ , ಶಿಕ್ಷಕಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಹರೀಶ್ಚಂದ್ರ ಕೋಟೇಶ್ವರ ವಂದಿಸಿದರು.
0 comments:
Post a Comment