ಬೈಂದೂರು ಬಿಜೆಪಿ ರೈತಮೋರ್ಚಾ ಪ್ರತಿಭಟನೆ

ಬೈಂದೂರು: ಗ್ರಾಮೀಣ ಭಾಗ ಸೇರಿದಂತೆ ಜಿಲ್ಲೆಯಲ್ಲಿ ಅನಿಯಮಿತ ವಿದ್ಯುತ್‌ ಕಡಿತ ವಿರೋಧಿಸಿ ಭಾರತೀಯ ಜನತಾ ಪಕ್ಷದ ರಾಜ್ಯ ರೈತಮೋರ್ಚಾದ ವತಿಯಿಂದ ಬೈಂದೂರು ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
    ಪ್ರತಿಭಟನೆಯ ನೇತƒತ್ವ ವಹಿಸಿದ ಬಿಜೆಪಿ ರಾಜ್ಯ ರೈತಮೋರ್ಚಾದ ಉಪಾಧ್ಯಕ್ಷ ದೀಪಕ್‌ ಕುಮಾರ ಶೆಟ್ಟಿ ಮಾತನಾಡಿ ಅನಿಯಮಿತ ಲೋಡ್‌ ಶೆಡ್ಡಿಂಗ್‌ ನಿಂದ ಜನ ಕಂಗೆಟ್ಟು ಹೋಗಿದ್ದಾರೆ.ಇಲಾಖೆ ವಿದ್ಯುತ್‌ ವಿತರಣೆಯಲ್ಲಿ ತಾರತಮ್ಯ ನಡೆಸುತ್ತಿದೆ.ಸಮರ್ಪಕ ವಿದ್ಯುತ್‌ ಸರಬರಾಜು ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು. ಮೆಸ್ಕಾಂನ ಸಹಾಯಕ ಇಂಜಿನಿಯರ್‌ ಸಿದ್ದೇಶ್‌ ಮನವಿ ಸ್ವೀಕರಿಸಿದರು.
 ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕಾರ್ಯದರ್ಶಿ ಬಿ.ಎಸ್‌. ಸುರೇಶ ಶೆಟ್ಟಿ, ಗುರುರಾಜ ಗಂಟಿಹೊಳೆ, ಸದಾನಂದ ಉಪ್ಪಿನಕುದ್ರು, ಮಹಿಳ ಮೋರ್ಚಾದ ಅಧ್ಯಕ್ಷೆ ನಯನಾ ಶ್ಯಾನುಭಾಗ್‌, ಆನಂದ ಖಾರ್ವಿ, ಸುರೇಶ ಬಿಜೂರು, ರಾಜೇಂದ್ರ ಎಸ್‌ ಮುಂತಾದವರು ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com