ಕ್ಷಿಪ್ರ ದೇವಾಡಿಗಗೆ ಸನ್ಮಾನ

ಉಪ್ಪುಂದ: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಸಿಇಟಿ ಮೆಡಿಕಲ್ ವಿಭಾಗದಲ್ಲಿ 37ನೇ ರ್ಯಾಂಕ್ ಪಡೆದ ಬಿಜೂರು ಕ್ಷಿಪ್ರ ದೇವಾಡಿಗರನ್ನು ಸಂಘದ  ವತಿಯಿಂದ ರೂ.25 ಸಾವಿರ ನಗದನ್ನು ನೀಡಿ ಅಭಿನಂದಿಸಿ ಸನ್ಮಾನಿಸಿದರು. ಹಿಂದೆ ಉನ್ನತ ಶಿಕ್ಷಣ ಸ್ಥಿತಿವಂತರ ಆಸ್ತಿಯಾಗಿತ್ತು. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ ಸರಕಾರ ಆರ್ಥಿಕವಾಗಿ ಹಿಂದುಳಿದವರರಿಗೆ ಶಿಕ್ಷಣದ ಭಾಗ್ಯ ಸಿಗುವಂತೆ ಮಾಡಿದೆ, ಹಾಗೂ ತಂದೆ ಹೋಟೆಲ್ ಕಾರ್ಮಿಕರಾಗಿ ಎರಡು ಹೆಣ್ಣು ಮಕ್ಕಳಿಗೆ ತಮ್ಮ ಶಕ್ತ್ಯಾನುಸಾರ ವಿದ್ಯಾಭ್ಯಾಸ ನೀಡಿದ್ದು, ಕ್ಷಿಪ್ರಾ  ಕನ್ನಡ ಮಾಧ್ಯಮದಲ್ಲಿ ಕಲಿತರೂ ಇಂದು ರಾಜ್ಯದಲ್ಲಿಯೇ 37ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಈ ಸಾಧನೆಗಾಗಿ ಇವರನ್ನು ಸಂಘವು  ಗೌರವಿಸುತ್ತದೆ. ಅಲ್ಲದೇ ನಮ್ಮ ಬೆಳವಣಿಗೆ ಜೊತೆಯಲ್ಲಿ ಸಮಾಜದ ಇತರರನ್ನೂ ಬೆಳೆಸಲು ನಾವು ಈ ಪರಿಸರದ ಯಾವುದೇ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದರೆ ಅವರನ್ನು ಪ್ರೋತ್ಸಾಹಿಸುತ್ತೇವೆ ಎಂದರಲ್ಲದೇ ಒಬ್ಬರನ್ನು ಸನ್ಮಾನಿಸುವುದರಿಂದ ಮತ್ತೊರ್ವ ಪ್ರತಿಭಾವಂತರಿಗೆ ಪ್ರೇರಕವಾಗುತ್ತದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಸಂಘದ ನಿರ್ದೇಶಕರಾದ ಮೋಹನ ಪೂಜಾರಿ, ಗುರುರಾಜ್ ಹೆಬ್ಬಾರ್, ಕೊರಗ ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮಮತಾ ವಿ. ಮಯ್ಯ ಉಪಸ್ಥಿತರಿದ್ದರು. ವ್ಯವಸ್ಥಾಪಕ ಸತೀಶ ಪೈ ಸ್ವಾಗತಿಸಿದರು, ವಸೂಲಾತಿ ವಿಭಾಗದ ಹಾವಳಿ ಬಿಲ್ಲವ  ಕಾರ್ಯಕ್ರಮವನ್ನು ನೀರೂಪಿಸಿ, ವಂದಿಸಿದರು. 

ಚಿತ್ರ: ಖ.ರೈ.ಸೇ.ಸ.ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಇವರು ಬಿಜೂರು ಕ್ಷಿಪ್ರ ದೇವಾಡಿಗರನ್ನು ಸಂಘದ ವತಿಯಿಂದ ಸನ್ಮಾನಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com