ಸರ್ಕಾರಿ ಬಸ್ ಸೇವೆಯನ್ನು ಹೆಚ್ಚಿಸುವಂತೆ ಮನವಿ

ಕುಂದಾಪುರ: ಶಿರೂರು, ಬೈಂದೂರು ನಾವುಂದದ ವರೆಗಿನ ಪಾಸ್ ಹೊಂದಿದ ಕಾಲೇಜು ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಹಾಗೂ ಪಾಸ್ ಹೊಂದಿರುವವರು ಕೊನೆಯಲ್ಲಿ ಬಸ್ ಹತ್ತಬೇಕು ಎಂದು ತಾಕೀತು ಮಾಡಿರುವುದನ್ನು ವಿರೋಧಿಸಿ ಈ ಭಾಗದ ಪಾಸ್ ಹೊಂದಿದ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ಕುಂದಾಪುರ ಡಿಪೋ ಮ್ಯಾನೇಜರ್‍ಗೆ ಮನವಿ ಸಲ್ಲಿಸಿದರು. 
     ದಿನವೂ 500ಕ್ಕೂ ಹೆಚ್ಚು ಪಾಸ್ ಹೊಂದಿದ ವಿದ್ಯಾರ್ಥಿಗಳು ಕುಂದಾಪುರದ ವಿವಿಧ ಶಿಕ್ಷಣ ಸಂಸ್ಥೆಗೆ ತೆರಳುತ್ತಿದ್ದು ಕಾಲೇಜು ಅವಧಿಯಲ್ಲಿ ಕೆಲವೇ ಕೆಲವು ಸರ್ಕಾರಿ ಬಸ್ಸುಗಳು ಸಂಚಾರ ಮಾತ್ರ ಇರುವುದರಿಂದ ವಿದ್ಯಾರ್ಥಿಗಳು ಪ್ರಯಾಣಿಸಲಾಗದ ಸ್ಥಿತಿ ಉಂಟಾಗಿದ್ದು ಹೆಚ್ಚುವರಿಯಾಗಿ ಬೆಳಿಗ್ಗೆ ಹಾಗೂ ಸಂಜೆ ಶಾಲಾಕಾಲೇಜು ಅವಧಿಯಲ್ಲಿ ಬಸ್‍ಗಳನ್ನು ಓಡಿಸಬೇಕು, ವಿದ್ಯಾರ್ಥಿಗಳನ್ನು ದ್ವಿತೀಯ ದರ್ಜೆ ಪ್ರಯಾಣಿಕರಂತೆ ನೋಡುವುದನ್ನು ನಿಲ್ಲಿಬೇಕು ಮತ್ತು ಐಶಾರಾಮಿ ಬಸ್ಸುಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಸ್ ಸಹಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು. 
   ಸೀಮಿತ ಬಸ್ಸುಗಳಿರುವುಂದರಿಂದ ದೂರ ಪ್ರದೇಶಗಳಿಗೆ ತೆರಳುವ ವಿದ್ಯಾರ್ಥಿನಿಯರು ಬಸ್ಸಿನಲ್ಲಿ ತೆರಳಲಾಗದೇ ಆತಂಕಪಡುವುದು ಇತ್ತಿಚಿಗೆ ಹೆಚ್ಚಾಗಿ ಕಂಡುಬರುತ್ತಿದೆ.  ಬಸ್ಸಿನಲ್ಲಿ ಪ್ರಯಾಣಿಸುವ ವಿವಿಧ ಕಾಲೇಜು ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com