ಡಿವೈಎಫ್‌ಐ, ಎಸ್‌ಎಫ್‌ಐ ಪ್ರತಿಭಟನೆ

ಕುಂದಾಪುರ: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ| ಯು.ಆರ್‌.ಅನಂತಮೂರ್ತಿ ಅವರ ಸಾವನ್ನು ಸಂಭ್ರಮಿಸುವ ವಿಕೃತ ಮನಸ್ಸುಗಳ ಹಿಂದೆ ಒಂದು ರಾಜಕೀಯ ಸಿದ್ಧಾಂತವಿದೆ. ಅಂತಹಾ ರಾಜಕೀಯ ಸಿದ್ದಾಂತದ ವಿಚಾರಧಾರೆಯಿಂದ ಪ್ರೇರಿತರಾಗಿ ನಡೆಯುತ್ತಿರುವ ಇಂತಹಾ ಕೃತ್ಯಗಳು ಖಂಡನೀಯ ಎಂದು ಡಿವೈಎಫ್‌ನ ತಾಲೂಕು ಉಪಾಧ್ಯಕ್ಷ ಸುರೇಶ್‌ ಕಲ್ಲಾಗರ ಹೇಳಿದರು.

ಅನಂತಮೂರ್ತಿ ಸಾವಿನ ಸಂದರ್ಭ ವಿಕೃತ ಮನಸ್ಸುಗಳಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ವಿರುದ್ಧ ಡಿವೈಎಫ್‌ಐ ತಾಲೂಕು ಘಟಕದ ವತಿಯಿಂದ ಕುಂದಾಪುರದಲ್ಲಿ ಭಾನುವಾರ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ರಾಜೇಶ್‌ ವಡೇರ ಹೋಬಳಿ ಮಾತನಾಡಿ, ಹಿಂದುಗಳೆಲ್ಲರೂ ಒಂದೆಂದು ಹೇಳುವ ಹಿಂದೂ ಮತಾಂಧ ಸಂಘಟನೆಗಳು ಹಿಂದೂ ಸಂಸ್ಕೃತಿಯನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸುತ್ತಿರುವುದು ಸಮಸ್ತ ಹಿಂದೂಗಳಿಗೆ ಮಾಡುತ್ತಿರುವ ಅವಮಾನವೆಂದರು.

ತಾಲೂಕು ಅಧ್ಯಕ್ಷ ಸಂತೋಷ್‌ ಹೆಮ್ಮಾಡಿ, ಎಸ್‌.ಎಫ್‌.ಐ ನಾಯಕ ಶ್ರೀಕಾಂತ ಹೆಮ್ಮಾಡಿ, ಗಣೇಶ್‌ ದಾಸ್‌, ರವಿ ವಿ.ಎಂ, ರಾಜ ಬಿಟಿಆರ್‌, ಮಂಜುನಾಥ ಶೋಗನ್‌, ಶೇಖರ ಡಿ, ಗಣೇಶ್‌ ಕಲ್ಲಾಗರ ಮೊದಲಾದವರು ಭಾಗವಹಿಸಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com