ತೆನೆ ಹಬ್ಬ: ನೊವೆನಾ ಪ್ರಾರ್ಥನೆಗೆ ಚಾಲನೆ

ಕುಂದಾಪುರ: ಕರಾವಳಿ ಕ್ರೈಸ್ತರ ಪವಿತ್ರ ಹಬ್ಬವಾದ ಕನ್ಯಾ ಮರಿಯಮ್ಮನವರ ಜನ್ಮದಿನ (ಮೊಂತಿ ಫೆಸ್ತ್, ತೆನೆಹಬ್ಬ) ಪ್ರಯುಕ್ತ ಪೂರ್ವ ತಯಾರಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ  ಶನಿವಾರ ಚಾಲನೆ ನೀಡಲಾಯಿತು. 
    ಕರ್ನಾಟಕ ಕರಾವಳಿಯ ಕ್ರೈಸ್ತರು ಕನ್ಯಾ ಮರಿಯಮ್ಮನವರ ಜನ್ಮದಿನವನ್ನು ಹೊಸ ಬೆಳೆಯ ಹಬ್ಬವನ್ನಾಗಿ ಆಚರಿಸುವ ರೂಡಿಯಿದೆ. ಅಂದು ತಮ್ಮ ಗದ್ದೆಗಳಲ್ಲಿ ಬೆಳೆಸಿದ ಹೊಸ ಪೈರನ್ನು ದೇವರಿಗೆ ಸಮರ್ಪಿಸಿ ಹೊಸ ಅಕ್ಕಿಯ ಊಟ ಮಾಡುವುದು ಇವರ ವಾಡಿಕೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಚರ್ಚುಗಳಲ್ಲಿ ಕನ್ಯಾಮರಿಯಮ್ಮನವರಿಗೆ ನೊವೆನಾ ಪ್ರಾರ್ಥನೆಯೊಂದಿಗೆ ತೆನೆ ಹಬ್ಬಕ್ಕೆ ವಿಶೇಷ ತಯಾರಿ ಆರಂಭಿಸಲಾಗುತ್ತದೆ. ಸೆಪ್ಟಂಬರ್ 8ರಂದು ಕರಾವಳಿಯ ಕ್ರೈಸ್ತ ಸಮುದಾಯ ವಿಜೃಂಭಣೆಯಿಂದ ತೆನೆ ಹಬ್ಬ ಆಚರಿಸುತ್ತಾರೆ. ಅಂದು ಸಂಪೂರ್ಣ ಸಸ್ಯಹಾರದಿಂದ ಕೂಡಿದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಕುಟುಂಬವರ್ಗ ಹಾಗೂ ನೆರೆಯವರೊಂದಿಗೆ ಕೂಡಿ ಸವಿಯುತ್ತಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com