ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವುದರ ಬಗ್ಗೆ ಸಮಗ್ರ ಕಾರ್ಯಯೋಜನೆ

ಕುಂದಾಪುರ: ಮಕ್ಕಳ ಮನೋಭಾವ ಬದಲಾಗಬೇಕು. ಮಕ್ಕಳ ಆರೋಗ್ಯ, ಕ್ರೀಯಾಶೀಲತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿರುವುದು ಇಂದು ಅತೀ ಅಗತ್ಯವಾಗಿದೆ. ಸುದೃಢ ಮನಸ್ಸು ಸುದೃಢ ಆರೋಗ್ಯವನ್ನು ಬಿಂಬಿಸುತ್ತದೆ. ಬಡವರ ಮಕ್ಕಳು ಅಪೌಷ್ಟಿಕತೆ ಆಹಾರವಿಲ್ಲದೇ ಬಳಲುತ್ತಿದ್ದರೆ, ಶ್ರೀಮಂತರ ಮಕ್ಕಳು ಪೌಷ್ಟಿಕತೆಯ ಆಹಾರವಿದ್ದರೂ ಅದನ್ನು ಬಳಸದೇ ಇರುವುದು ವಾಸ್ತವವಾಗಿದೆ . ಮಕ್ಕಳ ಅಪೌಷ್ಟಿಕತೆಯನ್ನು ತಡೆಯುವಲ್ಲಿ ಸಮಾಜದೊಂದಿಗೆ ಇಲಾಖೆಯೂ ಸಮಗ್ರ ಕಾರ್ಯಯೋಜನೆಯನ್ನು ರಚಿಸಬೇಕಾಗಿದೆ ಎಂದು ಉಡುಪಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಶಿವಶಂಕರ್‌ ಬಿ.ಅಮ್ಮಣ್ಣವರ ಹೇಳಿದರು.

ಅವರು ಕುಂದಾಪುರ ಶ್ರೀ ಲಕ್ಷ್ಮಿನರಸಿಂಹ ಕಲಾ ಮಂದಿರದ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ತಾಲೂಕು ಆಡಳಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ, ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಂದಾಪುರ ಮತ್ತು ವಕೀಲರ ಸಂಘ(ರಿ), ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವುದರ ಬಗ್ಗೆ ಸಮಗ್ರ ಕಾರ್ಯಯೋಜನೆ: ಅನುಷ್ಠಾನ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಬಗ್ಗೆ ಅರಿವು-ನೆರವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎ.ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ್‌ ವೆಂಕನಗೌಡ ಪಾಟೀಲ್‌ ಮಾತನಾಡಿ,

ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್‌ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಭಂಡಾರಿ, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಯೋಗೇಶ್ವರ ಎಸ್‌., ಕುಂದಾಪುರ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಸಿ.ಬಿ.ಪಾಟೀಲ್‌, ಕುಂದಾಪುರ ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಅನುಪಮ ಲಕ್ಷಿ, ಬಿ., ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ಎನ್‌ ನಾಯಕ್‌, ಮಹಿಳಅ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಭಾಗೀರಥಿ ಎಸ್‌.ಹೆಬ್ಟಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ|ಚಿದಾನಂದ ಉಪಸ್ಥಿತರಿದ್ದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಸ್ವಾಗತಿಸಿದರು. ಶಾನಕಟ್ಟು ಉಮೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ವಕೀಳರ ಸಂಘದ ಪ್ರಧಾನ ಕಾರ್ಯದರ್ಶಿ ಶಿರಿಯಾರ ಮುರಳೀಧರ ಶೆಟ್ಟಿ ವಂದಿಸಿದರು.

ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವ ಬಗ್ಗೆ ವೈದ್ಯಕೀಯ ವಿಶ್ಲೇಷಣೆಯೊಂದಿಗೆ ತಜ್ಞರ ಸಲಹೆ ಈ ವಿಷಯಗಳ ಬಗ್ಗೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ|ಶೈಲಜಾ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾರ್ಯಯೋಜನೆಯ ಬಗ್ಗೆ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಿಕ್ಷಣ ಸಂಯೋಜಕ ಉದಯ ಗಾಂವ್ಕರ್‌ ಕಾರ್ಯಾಗಾರವನ್ನು ನೆಡೆಸಿಕೊಟ್ಟರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com