ಆ.9: ಲಂಡನ್ ಯಕ್ಷಗಾನ ಸ್ಪರ್ಧೆ

ಕುಂದಾಪುರ: ಇಲ್ಲಿನ ನೆಹರೂ ಮೈದಾನದಲ್ಲಿ ಲಂಡನ್ ಯಕ್ಷಗಾನ ಸ್ಪರ್ಧೆ(ಬಡಗು ತಿಟ್ಟು) ಆ.9 ರಿಂದ 15 ರ ತನಕ ನಡೆಯಲಿದೆ. 
      ಆ. 9, ಬೆಳಗ್ಗೆ 9.30 ಕ್ಕೆ ಶಿವಮೊಗ್ಗದ ಶ್ರೀಶಾರದಾ ದೇವಿ ಅಂಧರ ವಸತಿ ಶಾಲೆ ಮಕ್ಕಳಿಂದ ಯಕ್ಷಗಾನ ಪ್ರದರ್ಶನದ ಬಳಿಕ 11ಗಂಟೆಗೆ ಉದ್ಘಾಟನೆ, ಮಧ್ಯಾಹ್ನ 12.15 ರಿಂದ ನೀಲಾವರ ಶ್ರೀಮಹಿಷಮರ್ಧಿನಿ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಿಂದ ಪ್ರದರ್ಶನವಿದೆ. 
   ಆ. 10, ಮಧ್ಯಾಹ್ನ 12.30 ರಿಂದ ನಾಗೂರು ಹೆರಂಜಾಲು ಯಕ್ಷಗಾನ ಪ್ರತಿಷ್ಠಾನ, ಸಂಜೆ 6.30 ರಿಂದ ಪೆರ್ಡೂರು ಶ್ರೀಅನಂತಪದ್ಮನಾಭ ಕೃಪಾಪೋಷಿತ ಯಕ್ಷಗಾನ ಮಂಡಳಿ, ಆ. 11, ಮಧ್ಯಾಹ್ನ 12.30 ರಿಂದ ಸೀತೂರು ಗುತ್ಯದೆಹಳ್ಳಿ ಶ್ರೀಗುತ್ಯಮ್ಮ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಪ್ರದರ್ಶನವಿದೆ. 
   ಮಧ್ಯಾಹ್ನ 3.30 ರಿಂದ ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಆ. 12, ಮಧ್ಯಾಹ್ನ 12.30ರಿಂದ ಸಾಸ್ತಾನ ಗೋಳಿಗರಡಿಯ ಶ್ರೀಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸಂಜೆ 6.30 ರಿಂದ ನೀಲಾವರ ಕೆಳಕುಂಜಾಲು ಯಕ್ಷ ಸಮೂಹ ಯಕ್ಷಗಾನ ಕಲಾ ಪ್ರತಿಷ್ಠಾನದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಆ. 13, ಮಧ್ಯಾಹ್ನ 12.30ರಿಂದ ಗೇರುಸೊಪ್ಪ ಬಂಗಾರಮಕ್ಕಿ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಮಧ್ಯಾಹ್ನ 3.30 ರಿಂದ ಸಿದ್ಧಾಪುರದ ಶ್ರೀಶಂಭು ಲಿಂಗೇಶ್ವರ ಯಕ್ಷಗಾನ ಮೇಳ, ಆ. 14, ಬೆಳಗ್ಗೆ 9.30ರಿಂದ ಮಾರಣಕಟ್ಟೆ ಮೇಳ, ಮಧ್ಯಾಹ್ನ 3.30ರಿಂದ ಕೊಂಡದಕುಳಿ ಪೂರ್ಣಚಂದ್ರ ಯಕ್ಷ ಕಲಾ ಪ್ರತಿಷ್ಠಾನದಿಂದ ಪ್ರದರ್ಶನವಿದೆ. 
    ಆ. 15, ಬೆಳಗ್ಗೆ 9.30ರಿಂದ ಕುಂದಾಪುರ ಹಂಗಳೂರು ಯಕ್ಷಶ್ರೀ ಪ್ರವಾಸಿ ಯಕ್ಷಗಾನ ಮೇಳ, ಮಧ್ಯಾಹ್ನ 12.30 ರಿಂದ ಹಾಲಾಡಿ ಮಯ್ಯ ಯಕ್ಷ ಬಳಗ, ಮಧ್ಯಾಹ್ನ 3.30 ರಿಂದ ಕಾರ್ಕಳದ ಶ್ರೀಮಹಾಗಣಪತಿ ಕಲಾ ಸಾಂಸ್ಕೃತಿಕ ಪ್ರತಿಷ್ಠಾನ, ಸಂಜೆ 6.30 ರಿಂದ ಬೆಂಗಳೂರಿನ ಯಕ್ಷ ಮಿತ್ರ ಕೂಟದಿಂದ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com