ಮರಳಿ ಬಾ ಶಾಲೆಗೆ ಆಂದೋಲನಕ್ಕೆ ಚಾಲನೆ‌

ಮರವಂತೆ: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನವಭಾರತ ನಿರ್ಮಾಣ ವೇದಿಕೆ ಕುಂದಾಪುರ ಮತ್ತು ಶಿಕ್ಷಣ ಇಲಾಖೆ ಬೈಂದೂರು ಇವರ ಆಶ್ರಯದಲ್ಲಿ ಮರಳಿ ಬಾ ಶಾಲೆಗೆ ಆಂದೋಲನಕ್ಕೆ ಚಾಲನೆ‌ ನೀಡಲಾಯಿತು.

ನಿವೃತ್ತ ಉಪನ್ಯಾಸಕರಾದ ಎಸ್‌.ಜನಾರ್ದನ್‌ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ದೇಶದಲ್ಲಿ ಎಷ್ಟೋ ಮಕ್ಕಳು ಶಾಲೆಗೆ ಹೋಗದೇ ದುಶ್ಚಃಟಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳು ಶಾಲೆಗೆ ಬರುವಂತೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಹೇಳಿದರು.
    ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಪನ್ಮೂಲ ವ್ಯಕ್ತಿ ನಾಗರಾಜ ಕಾರಂತ ಅವರು ಗುರುತಿನ ಚೀಟಿ ವಿತರಿಸಿ ಮಾತನಾಡಿ, ಸ್ವಯಂ ಸೇವಾ ಕಾರ್ಯಕರ್ತರು ನಿಸ್ವಾಧನ ಸೇವೆಯಿಂದ ಕೆಲಸಮಾಡಿ ಶಾಲೆಗೆ ಹೋಗದ ಮಕ್ಕಳನ್ನು ಗುರುತಿಸಿ ಅವರ ಪೋಷಕರ ಮನ ಒಲಿಸಿ ಶಾಲೆಗೆ ಬರುವಂತೆ ಮಾಡಬೇಕು ಎಂದರು.
    ಕಾರ್ಯಕ್ರಮದ ವೇದಿಕೆಯ ಗ್ರಾ.ಪಂ ಮರವಂತೆ ಅಧ್ಯಕ್ಷೆ ಎ. ಸುಗುಣ, ಮರವಂತೆ ಪ್ರಾ.ಶಾಲೆ ಮುಖ್ಯೋಪದ್ಯಾಯಿನಿ ಸಾವಿತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್‌ ನಾಯ್ಕ ಹಾಗೂ ಸಮನ್ವಯ ಅಧಿಕಾರಿ ಚಂದ್ರ ನಾಯ್ಕ ಉಪಸ್ಥಿತರಿದ್ದರು.
    ನವ ನಿರ್ಮಾಣ ವೇದಿಕೆಯಲ್ಲಿ ರಾಘವೇಂದ್ರ ಹರ್ಕಾಡಿ ಪ್ರಾಸ್ತಾವಿಕ ಮಾತನಾಡಿದರು. ಸುನೀತಾ ಮರವಂತೆ ಸ್ವಾಗತಿಸಿದರು. ಸುಶೀಲಾ ಮರವಂತೆ ವಂದಿಸಿದರು.ಆಶಾಲತಾ ಕಾರ್ಯಕ್ರಮವನ್ನು ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com