ಭಂಡಾರ್‌ಕಾರ್ಸ್‌ ಕಾಲೇಜು: ಜೀವನಮೌಲ್ಯ ಶಿಕ್ಷಣ ಶಿಬಿರ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ ಕಾಲೇಜಿನಲ್ಲಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಉಡುಪಿ ಮತ್ತು ಶ್ರೀ ಕುಂದೇಶ್ವರ ದೇವಸ್ಥಾನ ಕುಂದಾಪುರ ಇವರ ನೆರವಿನೊಂದಿಗೆ ಒಂದು ದಿನದ ಜೀವನಮೌಲ್ಯ ಶಿಬಿರ ನಡೆಯಿತು.
     ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಶಿಕ್ಷಣ ಮತ್ತು ಸಂವಹನ ತಜ್ಞ, ಪ್ರೊ|ಎಂ.ಆರ್‌.ನಾಗರಾಜು ಮಾತನಾಡಿ, ಯಾವ ವ್ಯಕ್ತಿ ತಾನೂ ಒಳ್ಳೆಯದನ್ನು ಕಲಿತು ಮತ್ತು ಅದರಂತೆ ಬೆಳೆದು ಸಮಾಜವನ್ನು ಆ ದಿಶೆಯಲ್ಲಿ ಬೆಳೆಸುತ್ತಾನೋ ಅವನೇ ಬುದ್ಧಿವಂತ ಅದೇ ವಿದ್ಯಾಭ್ಯಾಸ.. ಆತ್ಮವಿಶ್ವಾಸ ತುಂಬಿಕೊಡದ ಶಿಕ್ಷಣ ಪ್ರಯೋಜನಕ್ಕೆ ಬಾರದು. ವಿದ್ಯೆಯಲ್ಲಿ ಸ್ವ ವಿಶ್ವಾಸದಿಂದ ಅಗತ್ಯವಾಗಿರಬೇಕು. ಸ್ವ ವಿಶ್ವಾಸವಿಲ್ಲದವನು ಕೆಟ್ಟ ಕೆಲಸಕ್ಕೆ ಇಳಿಯುತ್ತಾನೆ. ಕ್ರೌರ್ಯವನ್ನು ಮಾಡುತ್ತಾನೆ. ಅದರ ಹಿಂದೆ ಇರುವುದು ಅಜ್ಞಾನ. ಅಂದರೆ ತನ್ನ ಅಜ್ಞಾನದಿಂದ ಪ್ರಾಣಿಗಳಂತೆ ಅಜ್ಞಾನಿಯಾಗಿ ವರ್ತಿಸುತ್ತಾನೆ. ಅವು ಅಜ್ಞಾನಿ ಎಂಬುದು ಅದರ ನಡವಳಿಕೆಗಳಿಂದಲೆ ತಿಳಿಯುತ್ತದೆ. ತನ್ನಂತೆ ಇನೊಂದು ಪ್ರಾಣಿಯು ನೋವು ಹಿಂಸೆಯಿಂದ ಮಿಡಿಯುತ್ತದೆ ಎಂಬುದರ ಅರಿವು ಅದಕ್ಕೆ ಇರುವುದಿಲ್ಲ. ಆದರೆ ಮನುಷ್ಯನಿಗೆ ಎಲ್ಲದರ ಅರಿವು ಇದೆ. ಆದರೆ ಅನಾಗರಿಕನಂತೆ ಕೆಲವೊಮ್ಮೆ ವರ್ತಿಸುತ್ತಾನೆ. ಪ್ರಸ್ತುತದ ಸಮಾಜಿಕ ವ್ಯವಸ್ಥೆಯಲ್ಲಿ ಮೌಲ್ಯಯುತ ಶಿಕ್ಷಣದ ಅಗತ್ಯತೆ ಬಹಳ ಇದೆ ಎಂದರು.
    ನೀತಿಗಳು ಮತ್ತು ಮೌಲ್ಯಗಳು ಭಿನ್ನ ನೆಲೆಯಲ್ಲಿ ನಿಲ್ಲುತ್ತವೆ. ಅವುಗಳಲ್ಲಿ ಮುಖ್ಯವಾಗಿ ಆಂತರಿಕ ಮೌಲ್ಯ ಅಂದರೆ ಪ್ರೀತಿ ಮತ್ತು ಕೌತುಕ ಇನ್ನು ಎರಡನೆಯದು ಬಾಹ್ಯ ಮೌಲ್ಯ ಅಂದರೆ ಸತ್ಯ ,ಸೌಂದರ್ಯ ಮನುಷ್ಯನಿಗೆ ಆಂತರಿಕವಾಗಿ ಆತ್ಮವಿಶ್ವಾಸ , ಕೌತುಕದ ಜೊತೆಗೆ ಬಾಹ್ಯವಾಗಿ ಸತ್ಯ ಮತ್ತು ಸೌಂದರ್ಯಗಳು ಮೇಳವಿಸುತ್ತವೆ. ಇಲ್ಲಿ ಮೌಲ್ಯಕ್ಕೆ ಎಂದಿಗೂ ಜಾತಿ ಧರ್ಮದ ಸಂಘರ್ಷವಿಲ್ಲ. ಎಲ್ಲಾಧರ್ಮಗಳು ಸಮನ್ವಯದ ಹರಿಕಾರರು ಎಂದು ಅಭಿಪ್ರಾಯಪಟ್ಟರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಇದರ ಆಡಳಿತಾಧಿಕಾರಿ ಡಾ|ಹೆಚ್‌. ಶಾಂತಾರಾಮ ವಹಿಸಿದ್ದರು.
   ಕಾಲೇಜಿನ ಪ್ರಾಂಶುಪಾಲ ಡಾ|ಎನ್‌.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ ವಂದಿಸಿದರು.
     ಡಾ|ಪಾರ್ವತಿ ಜಿ.ಐತಾಳ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಫುಲ್ಲ ಬಿ. ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com