ರೋಟರಿಯ ಕುಟುಂಬ ಮಿಲನ

ಅಂಪಾರು: ರೋಟರಿ ಕ್ಲಬ್‌ನ ಕುಟುಂಬ ಮಿಲನ ಹಾಗೂ ಗಣ್ಯರ ಗೌರವಿಸುವ ಕಾರ್ಯಕ್ರಮವು ಅಂಪಾರಿನ ಕುಪ್ಪಗೋಡು ಗಣಪಯ್ಯ ಶೆಟ್ಟಿ ಅವರ ಮನೆಯಲ್ಲಿ ಜರಗಿತು.

ಮುಖ್ಯ ಅತಿಥಿಯಾದ ಆಳ್ವಾಸ್‌ ನುಡಿ ಸಿರಿಯ ತಾಲೂಕು ಘಟಕದ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ ಅವರು ಮಾತನಾಡಿ, ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿಯು ತನ್ನ ಸಾಮಾಜೀಕ ಕಾರ್ಯಕ್ರಮಗಳ ಮೂಲಕ ಇಂದು ಗ್ರಾಮೀಣ ಮಟ್ಟದಲ್ಲಿಯೂ ಗುರುತಿಸಿಕೊಂಡಿದೆ. ಈ ಸಂಸ್ಥೆಯು ಮನುಷ್ಯನ ಜೀವನದ ಮೌಲ್ಯವನ್ನು ಕಲಿಸಿಕೊಡುತ್ತಿದೆ. ಸಮಾಜದಲ್ಲಿ ಸಾವಿರಾರೂ ಜೀವಿಗಳಿವೆ. ಇದರಲ್ಲಿ ಮನುಷ್ಯ ಜೀವಿಯು ಒಂದು. ಕುಟುಂಬ ಸಮೇತವಾಗಿ ಜೀವಿಸುತ್ತಾನೆ. ಈ ಜೀವನದಲ್ಲಿ ಗಂಡ ಹೆಂಡಿರ ಜಗಳ, ಅತ್ತೆ ಸೂಸೆಯರ ಜಗಳ ಹೀಗೆ ಅನೇಕ ಏಳು ಬೀಳುಗಳು ಕಾಣುವ ಬಗ್ಗೆ ಹಾಸ್ಯಮಯವಾಗಿ ವಿವರಿಸಿದರು.

ಸಹಾಯಕ ರಾಜ್ಯಪಾಲ ಗಣೇಶ್‌ ಶೆಟ್ಟಿ ಮೊಳಹಳ್ಳಿ ಅವರು ಅಂಪಾರು ಸಿ.ಎ. ಬ್ಯಾಂಕಿನ ನಿವೃತ ಕಾರ್ಯನಿರ್ವಾಣಾಧಿಕಾರಿ ಜಗನ್ನಾಥ ಶೆಟ್ಟಿ ಅವರನ್ನು ಸಮ್ಮಾನಿಸಿ ಮಾತನಾಡಿದರು. ಜಗನ್ನಾಥ ಶೆಟ್ಟಿ ಅವರು ತಮ್ಮ ವೃತಿ ಜೀವನದಲ್ಲಿ ಬ್ಯಾಂಕುಗಳ ಮೂಲಕ ಅನೇಕರಿಗೆ ಉದ್ಯೋಗಕ್ಕೆ ದಾರಿ, ಮದುವೆಗಳಿಗೆ, ಮನೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇವರ ಇಂತಹ ಸಮಾಜಿಕ ಸೇವಾ ಕಾರ್ಯಗಳು ಮುಂದಿನ ಜೀವನಕ್ಕೆ ಶ್ರೀರಕ್ಷೆಯಾಗಲಿದೆ. ಸಮಾಜವು ಹೆಚ್ಚು ಹೆಚ್ಚು ಇವರನ್ನು ಗೌರವಿಸು ಕಾರ್ಯಮಾಡಬೇಕಾಗಿದೆ ಎಂದು ಹೇಳಿದರು. ಕ್ಲಬಿನ ಅಧ್ಯಕ್ಷ ಭುಜಂಗ ಶೆಟ್ಟಿ ಅಧ್ಯಕ್ಷತೆ ವಹಿಸಿದರು.

ವಲಯ ಸೇನಾನಿ ಶ್ಯಾಮ್‌ ಶೆಟ್ಟಿ, ಮಾಜಿ ವಲಯ ಸೇನಾನಿ ಕೆ. ಗಣಪಯ್ಯ ಶೆಟ್ಟಿ ಕುಪ್ಪಗೋಡು ಮತ್ತು ಮುಂತಾದವರು ಉಪಸ್ಥಿತರಿದರು.

ರೋಟರಿಯ ಸದಸ್ಯ ಸೀನಾ ಮಾಸ್ಟರ್‌ ಸ್ವಾಗತಿಸಿದರು. ಕ್ಲಬ್‌ನ ಸದಸ್ಯ ರಾಜೀವ ಶೆಟ್ಟಿ ಶ್ಯಾನ್‌ಕಟ್ಟು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸತೀಶ್‌ ಕುಮಾರ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com