ದೆಹಲಿಯಲ್ಲಿ ಕೊಂಕಣಿ ಖಾರ್ವಿ ಜನಪದ ಕಲಾ ತಂಡ

ಕುಂದಾಪುರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಂಗಳೂರು, ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ಕೊಂಕಣ ಖಾರ್ವಿ ಸಮಾಜ ಭಟ್ಕಳ ಕಲಾ ತಂಡವು ದೆಹಲಿಯ ಆರ್‌ ಕೆ ಪುರಂನಲ್ಲಿ ನಡೆದ ಕೊಂಕಣಿ ಸಂಭ್ರಮ ಕಾರ್ಯಕ್ರಮದಲ್ಲಿ ಕೊಂಕಣಿ ಖಾರ್ವಿ ಸಾಂಪ್ರದಾಯಿಕ ಜನಪದಕಲೆಗಳ ಪ್ರದರ್ಶನ ನೀಡಿತು.

ಕೇಂದ್ರದ ಮಾಜಿ ಸಚಿವ, ಆಸ್ಕರ್‌ ಫರ್ನಾಂಡೀಸ್‌ಅವರ ಮುಖ್ಯ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಚಾಲಕ ಶ್ರೀಧರ್‌ ಖಾರ್ವಿಯವರ ತಂಡವು, ಖಾರ್ವಿಗಳ ಹೋಳಿ ಹಬ್ಬದ ಕೋಲಾಟ, ಗುಮ್ಟೆ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಯ ವಿವಿಧ ಮಜಲುಗಳನ್ನು ಪ್ರತಿಬಿಂಬಿಸುವ ಖಾರ್ವಿ ನಾಚ ಪ್ರದರ್ಶನ ನೀಡಿತು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೊನಾಲ್ಡ ಕ್ಯಾಸ್ತೆಲಿಯೋ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಕೊಂಕಣ ಖಾರ್ವಿ ಕಲಾ ತಂಡದಲ್ಲಿ ಈಶ್ವರ ಮಂಜುನಾಥ ಖಾರ್ವಿ, ಮಹೇಂದ್ರ ವಿಠuಲ ಖಾರ್ವಿ, ಶ್ರೀನಿವಾಸ ವಸಂತ ಖಾರ್ವಿ, ನಾಗರಾಜ ಕೇಶವ ಖಾರ್ವಿ. ಅಶೋಕ ಮಂಜುನಾಥ ಖಾರ್ವಿ,ಅಜಯ ಗಣಪತಿ ಖಾರ್ವಿ, ನಾಗೇಶ ಗೋವೀಂದ ಖಾರ್ವಿ, ನಂದಾ ಪುರ್ಸು ಖಾರ್ವಿ ಪಾಲ್ಗೊಂಡು, ದೇಶದ ರಾಜಧಾನಿಯಲ್ಲಿ ಪ್ರದರ್ಶನ ನೀಡಿ ಕೊಂಕಣ ಖಾರ್ವಿಗಳ ಕಲೆಯನ್ನು ಪ್ರದರ್ಶಿಸಲು ಯಸಶ್ವಿ‌ಯಾದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com