ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ: ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಹಕ್ಲಾಡಿ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಹಾಗೂ ಹೊಂ. ಮಂಡಾಡಿ(ಹೊಂ.ಮಂಡಾಡಿ ಗ್ರಾಮ), ಚೌಕುಳಮಕ್ಕಿ(ಆಜ್ರಿ ಗ್ರಾಮ), ಮೂಡು ಹೇರಂಜಾಲು (ಹೇರಂಜಾಲು ಗ್ರಾಮ), ಹೊಸಪೇಟೆ (ತ್ರಾಸಿ), ಕಾಳಾವರ-1 (ಕಾಳಾವರ ಗ್ರಾಮ), ಕಳುವಿನಬಾಗಿಲು(ಬಳ್ಕೂರು ಗ್ರಾಮ), ಹಲ್ತೂರು(ಉಳ್ತೂರು ಗ್ರಾಮ), ಕೆಂಚನೂರು(ಕೆಂಚನೂರು ಗ್ರಾಮ), ಹೆಮ್ಮಣ್ಣು(ಮಚ್ಚಟ್ಟು), ಮಾವಿನಕಾರು (ಕೊಲ್ಲೂರು ಗ್ರಾಮ), ಗೋಳಿ ಹೊಳೆ(ಗೋಳಿಹೊಳೆ ಗ್ರಾಮ) ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ಹುದ್ದೆ ಖಾಲಿ ಇದ್ದು, 18ರಿಂದ 35 ವರ್ಷಗಳ ಅದೇ ಗ್ರಾಮದ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು ಎಸೆಸೆಲ್ಸಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯರು ಕನಿಷ್ಠ 4ನೆ ತರಗತಿ ತೇರ್ಗಡೆ ಹಾಗೂ ಗರಿಷ್ಠ ವಿದ್ಯಾರ್ಹತೆ 9ನೆ ತರಗತಿ ತೇರ್ಗಡೆಯಾಗಿರಬೇಕು. ಅರ್ಜಿ ಸಲ್ಲಿಸಲು ಆ.22 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಲಕ್ಷ್ಮೀ ನರಸಿಂಹ ಕಾಂಪ್ಲೆಕ್ಸ್, ಕೆ‌ಎಸ್‌ಆರ್‌ಟಿಸಿ ಡಿಪೊ ಎದುರುಗಡೆ, ಎನ್.ಎಚ್.66, ಕುಂದಾಪುರ ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com