ಹೊಸಂಗಡಿ ದಾಖಲೆಯ ವಿದ್ಯುತ್‌ ಉತ್ಪಾದನೆ

ಸಿದ್ದಾಪುರ: ಕುಂದಾಪುರ ತಾಲೂಕಿನ ಹೊಸಂಗಡಿ ಭೂಗರ್ಭ ವರಾಹಿ ಜಲವಿದ್ಯುತ್‌ ಯೋಜನೆಯ ವಿದ್ಯುದಾಗಾರದಲ್ಲಿ ಆ. 6ರಂದು 11.301 ದಶಲಕ್ಷ ಯೂನಿಟ್‌ಗಳಷ್ಟು ವಿದ್ಯುತ್‌ ಉತ್ಪಾದನೆ ಮಾಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಈ ಭಾರಿ 11.301 ದಶಲಕ್ಷ ಯೂನಿಟ್‌ಗಳಷ್ಟು ವಿದ್ಯುತ್‌ ಉತ್ಪಾದಿಸುವ ಮೂಲಕ ಈ ಹಿಂದಿನ ಒಂದು ದಿನದ ಗರಿಷ್ಠ ದಾಖಲೆ 11.210 ದಶಲಕ್ಷ ಯೂನಿಟ್‌ಗಳ ದಾಖಲೆ ಮುರಿದುಹಾಕಿದೆ. ದಿನದ ಗರಿಷ್ಠ ವಿದ್ಯುತ್‌ ಉತ್ಪಾದನೆಯೂ ಇದಾಗಿದೆ. ಈ ಸಾಲಿನಲ್ಲಿ ವಾರಾಹಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಈ ನೀರನ್ನು ವ್ಯರ್ಥವಾಗದಂತೆ ಸರಿಯಾಗಿ ವಿದ್ಯುತ್‌ ಉತ್ಪಾದನೆಗೆ ಕೆಪಿಸಿ ಬಳಸಿಕೊಂಡಿದೆ. ಇದರಿಂದ ರಾಜ್ಯದ ವಿದ್ಯುತ್‌ ಜಾಲಕ್ಕೆ ಹೆಚ್ಚಿನ ವಿದ್ಯುತ್‌ ಪೂರೈಸಿದಂತಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com