ಸೂಪರ್‌ ಸ್ಟಾರ್‌ ರಜನಿಕಾಂತ್ ಕೊಲ್ಲೂರಿಗೆ ಭೇಟಿ

ಬೈಂದೂರು: ದೇಶದ ಪ್ರಖ್ಯಾತ ಚಲನಚಿತ್ರ ತಾರೆ ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ದಿಢೀರ್ ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. 

ಇವರ ಭೇಟಿ ಪೂರ್ವ ನಿಗದಿತವಾಗಿರಲಿಲ್ಲ ಹಾಗೂ ಯಾರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಕಪ್ಪು ಪಂಚೆಯನ್ನು ಹಾಗೂ ಬಿಳಿ ಷರ್ಟ್ ಧರಿಸಿ ಸಾಮಾನ್ಯ ಭಕ್ತರ ಹಾಗೆ ಕೊಲ್ಲೂರಿಗೆ ಭೇಟಿ ನೀಡಿದ ಸೂಪರ್‌ಸ್ಟಾರ್ ದೇವರ ದರ್ಶನ ಪಡೆದು ಪುನೀತರಾದರು. 

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಅವರು ರಜಿನಿಕಾಂತ್‌ಗೆ ದೇವಿಯ ಪ್ರಸಾದ ನೀಡಿ, ಶಾಲು ಹೊದಿಸಿ ಗೌವಿಸಿದರು. ಆಡಳಿತ ಮಂಡಳಿ ಸದಸ್ಯರು, ದೇವಳದ ಕಾರ್ಯ ನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ ಉಪಸ್ಥಿತರಿದ್ದರು. ಕೇವಲ 15 ನಿಮಿಷಗಳ ಕಾಲ ದೇವಳದಲ್ಲಿದ ಸ್ಟೈಲ್ ಕಿಂಗ್ ತರಾತುರಿಯಲ್ಲಿ ನಿರ್ಗಮಿಸಿದರು. 

Super star RajanikanthVisited Kolluru temple
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com