ಕೋಟೇಶ್ವರ ವೃತ್ತ ಮಟ್ಟದ ಥ್ರೋ ಬಾಲ್‌ ಪಂದ್ಯಾಟ

ತೆಕ್ಕಟ್ಟೆ : ಕೋಟೇಶ್ವರ ವೃತ್ತ ಮಟ್ಟದ ಥ್ರೋ ಬಾಲ್‌ ಪಂದ್ಯಾಟ ಕಾರ್ಯಕ್ರಮವು ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರ ಶಾಲಾ ಸಂಚಾಲಕರಾದ ಉದ್ಯಮಿ ಟಿ.ರಮೇಶ ನಾಯಕ್‌ ಇವರ ಅಧ್ಯಕ್ಷತೆಯಲ್ಲಿ  ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದ ಸಭಾಂಗಣದಲ್ಲಿ ನಡೆಯಿತು.

ತೆಕ್ಕಟ್ಟೆ ರೋಟರಿ ಅಧ್ಯಕ್ಷ ತೆಕ್ಕಟ್ಟೆ ಶಂಕರ ದೇವಾಡಿಗ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿ ತೆಕ್ಕಟ್ಟೆ ರೋಟರಿ ಸದಸ್ಯರಾದ ವಿಜಯ ಕುಮಾರ್‌ , ಶಾಲಾ ಆಡಳಿತಾಧಿಕಾರಿ ವಿಠuಲ ಭಟ್‌ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಕೆ. ಇಂದ್ರಾಕ್ಷಿ ಉಡುಪ ಮೊದಲಾದವರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ: ಥ್ರೋ ಬಾಲ್‌ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಎಂ.ಸದಾರಾಮ ಶೆಟ್ಟಿ ಕ್ರೀಡಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಹುಡುಗರ ವಿಭಾಗದಲ್ಲಿ ಸೇವಾ ಸಂಗಮ ವಿದ್ಯಾಕೇಂದ್ರ ತಂಡವು ಪ್ರಥಮ ಸ್ಥಾನವನ್ನು ಕಾಳಾವರ ಸ.ಹಿ.ಪ್ರಾಥಮಿಕ ಶಾಲಾ ತಂಡವು ದ್ವಿತೀಯ ಸ್ಥಾನ ಪಡೆದಿದೆ ಹಾಗೂ ಹುಡುಗಿಯರ ವಿಭಾಗದಲ್ಲಿ ಕಾಳಾವರ ಸ.ಹಿ.ಪ್ರಾಥಮಿಕ ಶಾಲಾ ತಂಡವು ಪ್ರಥಮ ಸ್ಥಾನವನ್ನು ಹಾಗೂ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿದೆ

ದೆ„.ಶಿ.ಶಿಕ್ಷಕ ದತ್ತಾತ್ರೇಯ ಸ್ವಾಗತಿಸಿ. ಸಹ ಶಿಕ್ಷಕಿ ಕ. ಉಷಾ ವಂದಿಸಿದರು .

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com