ಸಮಾಜದ ಅಭಿವೃದ್ಧಿಗೆ ಮಾಧ್ಯಮದ ಪಾತ್ರ ಹೆಚ್ಚಬೇಕು: ಎಂ. ಎ. ಪೊನ್ನಪ್ಪ

ಉಡುಪಿ: ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳ ಬಗ್ಗೆ ಪತ್ರಿಕೆಗಳಿಗಿರುವಷ್ಟೇ ಜವಾಬ್ದಾರಿ ಸುದ್ದಿವಾಹಿನಿಗಳಿಗೂ ಇದ್ದು ಸಮಾಜದ ಸಾಂಸ್ಕೃತಿಕ ಸ್ಥಿತಿಯನ್ನು ಉನ್ನತಿಗೊಳಿಸಲು ವಾಹಿನಿಗಳು ಪ್ರಯತ್ನಿಸಬೇಕು. ಈ ರೀತಿಯಿಂದಾದರೂ ಸಮಾಜವನ್ನು ಸದೃಡಹೊಳಿಸಲು ಸುದ್ದಿವಾಹಿನಿಗಳು ಯೋಚಿಸಬೇಕಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಎ. ಪೊನ್ನಪ್ಪ ಹೇಳಿದರು. 

    ಕರ್ನಾಟಕ ಮಾಧ್ಯಮ ಅಕಾಡೆಮಿ, ಉಡುಪಿ ಜಿಲ್ಲಾ ವಾರ್ತಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ 'ಆಧುನಿಕ ಮಾಧ್ಯಮ ಇಂದಿನ ನೋಟ ಹಾಗೂ ಮುಂದಿನ ಸವಾಲು' ವಿಚಾರ ಸಂಕಿರಣ ಹಾಗೂ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
       ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಇಂದು ಆಧುನಿಕ ಕಾಲಘಟ್ಟದಲ್ಲಿ ಉಸಿರಾಡುತ್ತಿವೆ. ಬದುಕಿನ ಶೈಲಿ, ನಡೆ, ನುಡಿ, ವಿಚಾರಗಳು ದಿನದಿಂದ ದಿನಕ್ಕೆ ಬದಲಾಗತೊಡಗಿವೆ. ಈ ಸನ್ನಿವೇಷದಲ್ಲಿ ನಾವು ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಕತ್ತಲಲ್ಲಿ ಸಾಗುವ ಪಯಣಿಗನಿಗೆ ಬೆಳಕನ್ನು ತೋರುವ ಕೆಲಸವಷ್ಟೇ ನಮ್ಮದು. ಇಂದಿನ ಸಂಗತಿಗಳೇ ನಾಳಿನ ಸವಾಲಾಗಿ ನಮಗೆ ಎದುರಾಗುತ್ತವೆ. ಅದಕ್ಕೆ ನಾವು ಈಗಿನಿಂದಲೇ ಸಿದ್ಧರಾಗಬೇಕು. 
   ಸಮಾಜದ ಅಭಿವೃದ್ಧಿಗೆ ನಮ್ಮ ಪಾತ್ರ ಹೆಚ್ಚಾಗಬೇಕೆಂಬ ವಿವೇಕ, ಅರಿವು ನಮ್ಮಲ್ಲಿ ಸದಾ ಎಚ್ಚರದಲ್ಲಿರಬೇಕು ಎಂದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com