ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಊಡುಪಿ ಜಿಲ್ಲಾ ಘಟಕ ಉದ್ಘಾಟನೆ


ಉಡುಪಿ: ಸಮಯದ ಸದುಪಯೋಗ ವಿದ್ಯಾರ್ಥಿ ಜೀವನದಲ್ಲಿ ಪಾಲಿಸ ಬೇಕಾದ ಬಹು ಮುಖ್ಯ ಅಂಶವಾಗಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ಎ.ಮಾಧವ ಆಚಾರ್ಯ ಹೇಳಿದರು.
     ಅವರು ಉಡುಪಿಯ ಶಾರದ ಇಂಟರ್‍ ನ್ಯಾಶನಲ್ ಹೊಟೇಲ್ ನಲ್ಲಿ ನಡೆದ ಮಂಗಳೂರು ವಿವಿ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. ೧೯೭೭ ರ ಹೊತ್ತಿಗೆ ನಮ್ಮ ಪಿಪಿಸಿ ಕಾಲೇಜಿಗೆ ವಿದ್ಯಾರ್ಥಿನಿ ನಾಯಕಿಯಾಗಿದ್ದರು, ವಿದ್ಯಾರ್ಥಿನಿಯರು ಇಂದಿನ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕು. ನಾಯಕಿಯರಾಗಿ ಬೆಳೆಯ ಬೇಕು ಎಂದು ಅವರು ಕರೆ ನೀಡಿದರು.
ರಾಜ್ಯ ಕಾನೂನು ಸಲಹೆಗಾರ ದಿನಕರ್‍ ಶೆಟ್ಟಿ ಅಧ್ಯಕ್ಞತೆ ವಹಿಸಿ ಈ ವರ್ಷ ಸರ್ವ ಕಾಲೇಜು ವಿಧ್ಯಾರ್ಥಿ ಸಂಘ ಬೆಳ್ಳಿ ಹಬ್ಬ ಆಚರಿಸುತ್ತಿದೆ. ಆದರೆ ಸರಕಾರ ವಿದ್ಯಾರ್ಥಿ ನಾಯಕರನ್ನು ಕೀಳು ಮಟ್ಟದಲ್ಲಿ ನೋಡಿ ಕೊಳ್ಳುತ್ತಿದೆ. ಇದು ಸರಿಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ವಿದ್ಯಾರ್ಥಿ ಸಂಗ ರಾಜಕೀಯ ರಹಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ನೈತಿಕ ಶಕ್ತಿ ತುಂಬುವಲ್ಲಿ ದುಡಿಯುತ್ತಿರುವ ಸಂಸ್ಥೆ ಎಂದು ವಿವಿ ಸಾನೆಟ್ ಸದಸ್ಯ ರಾಮಾಂಜಿ ಅಭಿಪ್ರಾಯ ಪಟ್ಟರು.
ರಮಿತ್ ಕುಮಾರ್‍ ಪೋಲಿಟೆಕ್ನಿಕ್ ಸರ್ವ ಕಾಲೇಜು ಸಂಘದ ಅಧ್ಯಕ್ಷ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ವೀಕ್ಷಿತ್ ಭಂಡಾರಿ ಅತಿಥಿಗಳಾಗಿದ್ದರು. 
ವಿನುತಾ ಸ್ವಾಗತಿಸಿದರು ಮಧುಸೂಧನ್ ಕಾರ್ಯಕ್ರಮ ನಿರೂಪಿಸಿದರುಉದಯ ನಾಯಕ್ ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com