ಉಡುಪಿಯ ನೂತನ ಎಸ್‌ಪಿ ಆಗಿ ರಾಜೇಂದ್ರ ಪ್ರಸಾದ್

ಉಡುಪಿ: ಉಡುಪಿ ಜಿಲ್ಲಾ ನೂತನ ಎಸ್ಪಿಯಾಗಿ ಚಾಮರಾಜ ನಗರದ ರಾಜೇಂದ್ರ ಪ್ರಸಾದ್ ನೇಮಕಗೊಂಡಿದ್ದಾರೆ. ಅವರು ಶೀಘ್ರವೇ ಅಧಿಕಾರ ಸ್ವೀಕರಿಸಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಡಾ.ಎಂ. ಬಿ. ಬೋರಲಿಂಗಯ್ಯ ದಾವಣಗೆರೆಗೆ ವರ್ಗಾವಣೆಗೊಂಡಿದ್ದು, ಅವರನ್ನು ಅವರನ್ನು ಶುಕ್ರವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು. ಅವರು ಶುಕ್ರವಾರ ಹೆಚ್ಚುವರಿ ಎಸ್ಪಿ ಸಂತೋಷಕುಮಾರ್‌ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು
    ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾದಿಕಾರಿ ಡಾ. ಮುದ್ದು ಮೋಹನ್ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್‌, ಹೆಚ್ಚುವರಿ ಎಸ್ಪಿ ಸಂತೋಷಕುಮಾರ್‌, ಕಾರ್ಕಳ ಎಎಸ್ಪಿ ಅಣ್ಣಾಮಲೈ, ಕುಂದಾಪುರ ಡಿವೈಎಸ್ಪಿ ಬಿ.ಜಿ.ಪಾಟೀಲ್‌ ಮೊದಲಾದವರು ಬೋರಲಿಂಗಯ್ಯ ಅವರಿಗೆ ಶುಭ ಕೋರಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com