ಕೃಷಿ ಉಪಕರಣಗಳ ಪ್ರಾತ್ಯಕ್ಷತೆ.

ಉಪ್ಪುಂದ: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಹಾಗೂ ಸಂಘವು ಪ್ರಾಯೋಜಿಸಿರುವ ರೈತ ಶಕ್ತಿ, ರೈತ ಸೇವಾ ಒಕ್ಕೂಟ ಉಪ್ಪುಂದ, ಶ್ರೀ ಜಟ್ಟಿಗೇಶ್ವರ ರೈತ ಕೂಟ ಚರಕನಮಕ್ಕಿ ಕೂರ್ಸೆ ಕಾಲ್ತೋಡು ಇವರ ಜಂಟಿ ಆಶ್ರಯದಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಳ ಬಗ್ಗೆ ಮರ ಹತ್ತುವ ಯಂತ್ರ ಹಾಗೂ ಕೃಷಿ ಉಪಕರಣಗಳ ಪ್ರಾತ್ಯಕ್ಷತೆ. ಮಾಹಿತಿ ಕಾರ್ಯಕ್ರಮವು ಜರುಗಲಿರುವುದು. ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರ ಘನ ಉಪಸ್ಥಿತಿಯಲ್ಲಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಬಿ ಧನಂಜಯ ಸಹಪ್ರಾಧ್ಯಾಪಕರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋದನಾ ಕೇಂದ್ರ ಬ್ರಹ್ಮಾವರ, ಸದಾಶಿವ್ ರಾವ್ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಉಡುಪಿ, ಕುಛೇಲಯ್ಯ ನಿವೃತ್ತ ಅಧಿಕಾರಿ ತೋಟಗಾರಿಕೆ ಇಲಾಖೆ ಉಡುಪಿ, ಇವರುಗಳು ಭಾಗವಹಿಸಿ ಮಾಹಿತಿ ನೀಡಲಿರುವರು. ಎಗ್ರಿ ಮಾರ್ಟ್ ಈಸಿ ಲೈಫ್ ಎಂಟರ್‍ಪ್ರೈಸಸ್ ಇವರಿಂದ ತೆಂಗಿನ ಮರ ಹತ್ತುವ ಯಂತ್ರ, ಅಡಿಕೆ ಕೊಳೆ ರೋಗಕ್ಕೆ ಔಷಧಿ ಸಿಂಪಡಿಸುವ ಸ್ಪ್ರೇಯರ್, ಕಳೆ ಕೊಚ್ಚವ ಯಂತ್ರ, ಯಾಂತ್ರಿಕೃತ ಸಾಗಾಣಿಕಾ ವಾಹನ ಹಾಗೂ ಇತರ ಕೃಷಿ ಯಂತ್ರಗಳು ಮತ್ತು ಕೃಷಿ ಉಪಕರಣಗಳು ಪ್ರದರ್ಶನಗೊಳ್ಳಲಿರುವುದು. ಈ ಕಾರ್ಯಕ್ರಮಕ್ಕೆ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶಿಬಿರದ ಸದುಪಯೋಗ ಪಡೆದು ಕೊಳ್ಳುವಂತೆ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮಮತಾ ವಿ. ಮಯ್ಯ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com