ಯೋಗಾಭ್ಯಾಸದಿಂದ ಸ್ಥಸ್ತ ಸಮಾಜ ನಿರ್ಮಾಣ ಸಾಧ್ಯ: ಕೆ. ಪ್ರೇಮಾನಂದ ಶೆಟ್ಟಿ

ಕೋಟೇಶ್ವರ: ಯೋಗದಿಂದ ಮನಸ್ಸು ಮತ್ತು ದೆ„ಹಿಕ ಆರೋಗ್ಯ ಉತ್ತಮಗೊಳ್ಳುವುದರ ಜೊತೆಗೆ ಸ್ಥಸ್ತ ಸಮಾಜ ನಿರ್ಮಾಣ ಸಾಧ್ಯವೆಂದು ವಿಶ್ವ ವಿ.ಹಿಂ.ಪ. ಮಾಜಿ ಜಿಲ್ಲಾಧ್ಯಕ್ಷ ಕೆ. ಪ್ರೇಮಾನಂದ ಶೆಟ್ಟಿ ಹೇಳಿದರು.

ಜ್ಞಾನವಿಕಾಸ ಕೇಂದ್ರ ಕುಂದಾಪುರ, ರೋಟರಿ ಕ್ಲಬ್‌ ಕೋಟೇಶ್ವರ, ಆ್ಯನ್ಸ್‌ ಕ್ಲಬ್‌ ಕೋಟೇಶ್ವರ ಹಾಗೂ ಕರಾವಳಿ ಫ್ರೆಂಡ್ಸ್‌ ಬೀಜಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆ. 3 ರಂದು ಬೀಜಾಡಿ ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಜ್ಞಾನ ವಿಕಾಸ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯೋಗ ಧ್ಯಾನದಿಂದ ಮನುಷ್ಯನ ಮನಸ್ಸಿನ ಕೊಳೆಯನ್ನು ತೆಗೆದು ತನ್ಮೂಲಕ ಒತ್ತಡವನ್ನು ನಿರ್ವಹಿಸುವ ಶಕ್ತಿ ಹಾಗೂ ಕಲೆಯನ್ನು ಕಲಿಯಬಹುದಾಗಿದೆ. ಆಯುರ್ವೇದ ಶಾಸ್ತ್ರದ ಒಂದು ಅಂಗವಾಗಿರುವ ಯೋಗಾಭ್ಯಾಸದಿಂದ ಹಲವಾರು ರೋಗರುಜಿನಗಳನ್ನು ತಡೆಯಲು ಸಾಧ್ಯ. ತ್ರಿದೋಷಗಳು, ಜೀರ್ಣಕ್ರಿಯೆ,

ಸಪ್ತಧಾತುಗಳೊಡನೆ ಆತ್ಮ, ಇಂದ್ರೀಯ, ಮನಸ್ಸು ಪ್ರಸನ್ನವಾಗಿದ್ದಲ್ಲಿ ಆ ವ್ಯಕ್ತಿ ಆಯೋಗ್ಯವಂತನಾಗಿರಲು ಸಾಧ್ಯ. ಇಂತಹ ದೆ„ಹಿಕ ಸಮತೋಲನ ವ್ಯವಸ್ಥೆ ನಿರ್ಮಾಣಕ್ಕೆ ಪ್ರತಿಯೋರ್ವರು ಯೋಗಾಭ್ಯಾಸದೊಡನೆ ವ್ಯಾಯಾಮದಂತಹ ದೆ„ಹಿಕ ದಣಿವಿನ ಪರಿಲಕ³ನೆಯನ್ನು ಬೆಳಸಿಕೊಂಡಲ್ಲಿ ಆರೋಗ್ಯವಂತನಾಗಿರಲು ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕೋಟೇಶ್ವರ ರೋಟರಿ ಕ್ಲಬ್‌ ಅಧ್ಯಕ್ಷ ಗಣೇಶ್‌ ಆಚಾರ್‌ ಟಿ. ವಹಿಸಿದ್ದರು. ಯೋಗ ಗುರು ಶ್ರೀಮತಿ ಮುಕ್ತ ಮಾತಾಜಿ ಆಶೀರ್ವದಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯ ಮೋಹನ್‌ ಮಡಿವಾಳ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್‌ ಬೀಜಾಡಿ, ಕೋಟೇಶ್ವರ ಆ್ಯನ್ಸ್‌ ಕ್ಲಬ್‌ ಅಧ್ಯಕ್ಷೆ ವಿಶಾಲಾಕ್ಷಿ, ಕಾರ್ಯಕ್ರಮ ಸಂಘಟಕ ಗಣೇಶ್‌ ಪುತ್ರನ್‌, ಕರಾವಳಿ ಪ್ರಂಡ್ಸ್‌ ಅಧ್ಯಕ್ಷ ಚಂದ್ರ ಬೀಜಾಡಿ ಉಪಸ್ಥಿತರಿದ್ದರು.

ಗಣೇಶ್‌ ಪುತ್ರನ್‌ ಸ್ವಾಗತಿಸಿದರು. ಸುಧಾಕರ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಬಣ್ಣ ಪೂಜಾರಿ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ವಿಶಾಲಾಕ್ಷಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com