ಎರಡು ದಿನಗಳಿಂದ ಒಂದೇ ಸವನೆ ಮಳೆ ಗಾಳಿ

ಕುಂದಾಪುರ: ತಾಲೂಕಿನಲ್ಲಿ ಬುಧವಾರದಿಂದ ಒಂದೆ ಸವನೆ ಸುರಿಯುತ್ತಿರುವ ಗಾಳಿ ಮಳೆ ಅಬ್ಬರಕ್ಕೆ ಗುರುವಾರ ಕೆಲವೆಡೆ ನೆರೆ ಕಾಣಿಸಿಕೊಂಡಿದೆ. ನಾವುಂದ ಗ್ರಾಮದ ಸಾಲ್ಬುಡ, ಬಡಾಕೆರೆ ಮತ್ತು ನಾಡಾ ಗ್ರಾಮದ ಹಡವು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೆರೆ ಕಾಣಿಸಿಕೊಂಡಿದ್ದು ಕೃಷಿಭೂಮಿ, ತೋಟ ಸಂಪೂರ್ಣ ಜಲಾವತಗೊಂಡಿದೆ. ನೆರೆ ಪ್ರಕೋಪ ಸದ್ಯ ನಿಯಂತ್ರಣದಲ್ಲಿದ್ದು ಮಳೆ ಮುಂದುವರಿದರೆ ಸ್ಥಳಾಂತರ ಅನಿವಾರ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ. 

ಮನೆ ಹಾನಿ: ಗುರುವಾರ ಬೀಸಿದ ಗಾಳಿಮಳೆಗೆ ಮಾವಿನಮರ ಬಿದ್ದು ಮನೆ ಜಖಂಗೊಂಡ ಘಟನೆ ಶಿರೂರಿನ ಹಡವಿನಕೋಣೆಯಲ್ಲಿ ನಡೆದಿದೆ. ಇಲ್ಲಿನ ಮುಲ್ಲಾ ನೂರುಲ್ ಎಂಬವರ ಮನೆ ಹಾನಿಗೀಡಾಗಿದ್ದು ರೂ.40 ಸಾವಿರ ನಷ್ಟ ಅಂದಾಜಿಸಲಾಗಿದೆ. ಗ್ರಾ.ಪಂ.ಅಧಿಕಾರಿಗಳು ಭೇಟಿ ನೀಡಿದ್ದಾರೆ. 

ಗುರುವಾರ ಬೆಳಗ್ಗಿನಿಂದ ಒಂದೆ ಸವನೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಾಗರಪಂಚಮಿ ಖರೀದಿ ಪ್ರಕ್ರಿಯೆಗೆ ಅಡಿತಡೆ ಉಂಟಾಗಿದೆ. ಕುಂದಾಪುರದಿಂದ ಮುಳ್ಳಿಕಟ್ಟೆ ವರೆಗಿನ ರಾಷ್ಟ್ರೀಯ ಹೆದ್ದಾರಿ ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗಿದೆ. ಅಲ್ಲಲ್ಲಿ ವಿದ್ಯುತ್ ಕಡಿತವಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com